ಜಾಮಿಯಾ ಹಿಂಸಾಚಾರ: ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾಗೆ ಕ್ಲೀನ್ ಚಿಟ್ ನೀಡಿದ ಪೊಲೀಸರು

ಡಿಸೆಂಬರ್ 15 ರಂದು ಸಂಭವಿಸಿದ್ದ ಜಾಮಿಯಾ ಹಿಂಸಾಚಾರ ಸಂದರ್ಭ ದುರುದ್ದೇಶಪೂರಿತ ಟ್ವೀಟ್  ಮಾಡಿದ್ದ ಆರೋಪ ಎದುರಿಸುತ್ತಿದ್ದ  ಉಪಮುಖ್ಯಮಂತ್ರಿ ಮನೀಸ್ ಸಿಸೊಡಿಯಾ ಅವರಿಗೆ ದೆಹಲಿ ಪೊಲೀಸರು ಇಂದು ಕ್ಲೀನ್ ಚಿಟ್ ನೀಡಿದ್ದಾರೆ
ಮನೀಷ್ ಸಿಸೋಡಿಯಾ
ಮನೀಷ್ ಸಿಸೋಡಿಯಾ

ನವದೆಹಲಿ: ಡಿಸೆಂಬರ್ 15 ರಂದು ಸಂಭವಿಸಿದ್ದ ಜಾಮಿಯಾ ಹಿಂಸಾಚಾರ ಸಂದರ್ಭ ದುರುದ್ದೇಶಪೂರಿತ ಟ್ವೀಟ್  ಮಾಡಿದ್ದ ಆರೋಪ ಎದುರಿಸುತ್ತಿದ್ದ  ಉಪಮುಖ್ಯಮಂತ್ರಿ ಮನೀಸ್ ಸಿಸೊಡಿಯಾ ಅವರಿಗೆ ದೆಹಲಿ ಪೊಲೀಸರು ಇಂದು ಕ್ಲೀನ್ ಚಿಟ್ ನೀಡಿದ್ದಾರೆ

ಸಿಸೋಡಿಯಾ ತಮ್ಮ ಅಭಿಪ್ರಾಗಳನ್ನು ಮಾತ್ರ ಪೋಸ್ಟ್ ಮಾಡಿದ್ದಾರೆ. ಟ್ವೀಟ್ ಗಳು ಕೇವಲ ಪೊಲೀಸರ ವಿರುದ್ಧದ ಆರೋಪಗಳಾಗಿವೆ ಎನ್ನಲಾಗಿದೆ. 

ಈ ಸಂಬಂಧ ನೀಡಲಾಗಿದ್ದ ದೂರಿನ ಪರಿಶೀಲನೆಯಿಂದ ಟ್ವೀಟ್‌ಗಳು ಕೇವಲ ಪೊಲೀಸರ ವಿರುದ್ಧದ ಆರೋಪಗಳಾಗಿವೆ ಮತ್ತು ಯಾವುದೇ ಅಪರಾಧ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. 

ಮನೀಷ್ ಸಿಸೋಡಿಯಾ ಸುದ್ದಿ ಚಾನೆಲ್ ಗಳಲ್ಲಿ ಹರಿದಾಡುತ್ತಿದ್ದ ವಿಡಿಯೋ ಕ್ಲಿಪ್ ಟ್ವೀಟ್ ಮಾಡುವ ಮೂಲಕ  ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾವುದೇ ರೀತಿಯ ಅಪರಾಧವನ್ನು ಮಾಡಿಲ್ಲ ಎಂದು ಪೊಲೀಸರು ಕ್ರಮ ತೆಗೆದುಕೊಂಡ ವರದಿ (ಎಟಿಆರ್ ) ಸಲ್ಲಿಸಿದ್ದಾರೆ.

ದುರುದ್ದೇಶಪೂರಿತ ಟ್ವೀಟ್ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಸಿಸೋಡಿಯಾ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ವಕೀಲರೊಬ್ಬರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಾಹುಜಾ, ಕ್ರಮ ತೆಗೆದುಕೊಂಡ ವರದಿ ( ಎಟಿಆರ್ ) ಸಲ್ಲಿಸುವಂತೆ  ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ದೆಹಲಿಯಲ್ಲಿ ಬಿಜೆಪಿ ಬೆಂಕಿ ಇಟ್ಟಿದೆ. ಎಎಪಿ ಯಾವುದೇ ರೀತಿಯ ಹಿಂಸಾಚಾರವನ್ನು ವಿರೋಧಿಸುತ್ತದೆ. ಪೊಲೀಸರ ರಕ್ಷಣೆಯಲ್ಲಿ ಯುವಕರು ಹೇಗೆ ಬೆಂಕಿ ಇಡುತ್ತಿದ್ದಾರೆ ನೋಡಿ ಎಂದು ಬರೆದಿದ್ದ ವಿಡಿಯೋ ಪೋಸ್ಟ್ ಮಾಡಿದ್ದ ಸಿಸೋಡಿಯಾ ವಿರುದ್ಧ ವಕೀಲ ಅಲೋಕ್ ಶ್ರೀವಾಸ್ತವ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com