ಟ್ರಂಪ್ ಭಾರತ ಭೇಟಿಯಿಂದ ಭಾರತೀಯರ ಮೇಲೆ ಯಾವುದೇ ಪರಿಣಾಮ ಇಲ್ಲ: ಶಿವಸೇನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಭಾರತಕ್ಕೇನೂ ಲಾಭವಿಲ್ಲ. ಟ್ರಂಪ್ ಭೇಟಿ ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಭಾರತಕ್ಕೇನೂ ಲಾಭವಿಲ್ಲ. ಟ್ರಂಪ್ ಭೇಟಿ ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಅಭೂತಪೂರ್ವ ಸಿದ್ಧತೆ ನಡೆಸಿರುವ ಭಾರತ ಸರ್ಕಾರದ ನಡೆಯನ್ನು ಪರೋಕ್ಷವಾಗಿ ಶಿವಸೇನೆ ಟೀಕಿಸಿದ್ದು, ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಕುರಿತಂತೆ ಸುದೀರ್ಗ ಲೇಖನ ಪ್ರಕಟಸಿದೆ. 'ಟ್ರಂಪ್ ಭಾರತಕ್ಕೆ ಬರುತ್ತಿರುವುದು ಅಮೆರಿಕಕ್ಕೆ ಸಂಬಂಧಿಸಿದ ವಾಣಿಜ್ಯ ಒಪ್ಪಂದಗಳಿಗಾಗಿ ಮಾತ್ರ. ಇದರಿಂದ ಭಾರತೀಯರಿಗೆ ಯಾವುದೇ ರೀತಿಯ ಲಾಭವಿಲ್ಲ. ಟ್ರಂಪ್ ಭೇಟಿಯಿಂದ ಕೊಂಚವಾದಲೂ ಲಾಭವಿದೆ ಎಂದರೆ ಅದು ಅಹ್ಮದಾಬಾದ್ ಗೆ ಮಾತ್ರ ಎಂದು ಹೇಳಿದೆ.

ಅಂತೆಯೇ ಟ್ರಂಪ್ ಭಾರತ ಪ್ರವಾಸದ ವೇಳೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಚರ್ಚೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಧಾರ್ಮಿಕ ಸ್ವಾತಂತ್ರ್ಯ ನಮ್ಮ ಆಂತರಿಕ ವಿಚಾರ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಹೇಗೆ ಆಡಳಿತ ನಡೆಸಬೇಕು ಎಂಬುದಕ್ಕೆ ಹೊರಗಿನವರ ಸಲಹೆ ಅಗತ್ಯವಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com