ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ ಟ್ರಂಪ್, ಪತ್ನಿ ಮೆಲೇನಿಯಾ; ಪ್ರಧಾನಿ ಮೋದಿ ಸ್ವಾಗತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲೇನಿಯಾ ಅವರು ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಭಾರತಕ್ಕೆ ಬಂದಿಳಿದ ಟ್ರಂಪ್, ಮೆಲೇನಿಯಾ ಜೋಡಿ
ಭಾರತಕ್ಕೆ ಬಂದಿಳಿದ ಟ್ರಂಪ್, ಮೆಲೇನಿಯಾ ಜೋಡಿ

ಅಹ್ಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲೇನಿಯಾ ಅವರು ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಇಂದು ಬೆಳಗ್ಗೆ 11.45ಕ್ಕೆ ಟ್ರಂಪ್ ಮತ್ತು ಮೆಲೇನಿಯಾ ಅವರನ್ನು ಹೊತ್ತ ಏರ್ ಫೋರ್ಸ್ ಒನ್ ವಿಮಾನ ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಟ್ರಂಪ್ ಮತ್ತು ಮೆಲೇನಿಯಾ ಅವರನ್ನು ಸ್ವಾಗತಿಸಲು ಖುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದಾಬಾದ್ ಗೆ ತೆರಳಿದ್ದು, ಅವರೊಂದಿಗೆ ಮೋದಿ ಸಂಪುಟದ ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಅಹ್ಮದಾಬಾದ್ ಗೆ ತೆರಳಿದ್ದಾರೆ.

ಈ ಮೂಲಕ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಅಮೆರಿಕದ 7ನೇ ಅಧ್ಯಕ್ಷ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 1959ರ ಡಿ.9ರಿಂದ 14ರವರೆಗೆ ಅಂದಿನ ಅಧ್ಯಕ್ಷ ಡ್ವೈಟ್ ಡಿ. ಐಸೆನ್ ಹೋವರ್ ಅವರು ಆಗಮಿಸುವ ಮೂಲಕ ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಇತಿಹಾಸ ಸೃಷ್ಟಿಸಿದ್ದರು. 

ರಾಮಲೀಲಾ ಮೈದಾನ ಹಾಗೂ ಸಂಸತ್ತಿನ ಉಭಯ ಸದನಗಳಲ್ಲೂ ಐಸೆನ್ ಹೋವರ್ ಭಾಷಣ ಮಾಡಿದ್ದರು. ನಂತರ 1969ರ ಜು.3ರಂದು ರಿಚರ್ಡ್ ನಿಕ್ಸನ್, 1978ರ ಜ.1ರಂದು ಜಿಮ್ಮಿ ಕಾರ್ಟರ್, 2000ನೇ ಇಸವಿಯ ಮಾ.19ರಂದು ಬಿಲ್ ಕ್ಲಿಂಟನ್, 2006 ಮಾ.1ರಂದು ಜಾರ್ಜ್ ಡಬ್ಲ್ಯು ಬುಷ್, 2010 ನ.6 ಹಾಗೂ 2015ರ ಜ.24ರಂದು ಒಬಾಮಾ ಅವರು ಭೇಡಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com