ಡೊನಾಲ್ಡ್ ಟ್ರಂಪ್ ಭೇಟಿ: ಜನಜಂಗುಳಿಯಿಂದ ತುಂಬಿರುವ ಮೊಟೆರಾ ಕ್ರೀಡಾಂಗಣ! ವಿಡಿಯೋ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಇಲ್ಲಿನ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ ಜನ ಜಂಗುಳಿಯಿಂದ ತುಂಬಿದೆ.  
ಮೊಟೆರಾ ಕ್ರೀಡಾಂಗಣ
ಮೊಟೆರಾ ಕ್ರೀಡಾಂಗಣ

ಅಹಮದಾಬಾದ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಇಲ್ಲಿನ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ ಜನ ಜಂಗುಳಿಯಿಂದ ತುಂಬಿದೆ.  

ಸುಮಾರು 1 ಲಕ್ಷ ಆಸನದ ಸಾಮರ್ಥ್ಯದ ಕ್ರೀಡಾಂಗಣದೆಲ್ಲೆಡೆ ಜನರು ಭರ್ತಿಯಾಗಿದ್ದು, ಡೊನಾಲ್ಡ್  ಟ್ರಂಪ್ ಹಾಗೂ ಮೋದಿ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.

ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮತ್ತಿತರರ ತಂಡ ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸುತ್ತಿದೆ. ಯುವ ಜನಪದ ಕಲಾವಿದರು ಗಾಯನಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸಿ ಜನರನ್ನು ರಂಜಿಸುತ್ತಿದ್ದಾರೆ.

ಮೊಟೆರಾ ಇಂದು ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com