ಭಾರತದೊಂದಿಗೆ 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ- ಡೊನಾಲ್ಡ್ ಟ್ರಂಪ್ 

ಭಾರತ ಹಾಗೂ ಅಮೆರಿಕಾ ನಡುವೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿದಂತೆ  ಇತರ ಪ್ರಮುಖ ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. 
ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್-ಮೋದಿ
ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್-ಮೋದಿ

ನವದೆಹಲಿ:ಭಾರತ ಹಾಗೂ ಅಮೆರಿಕಾ ನಡುವೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿದಂತೆ  ಇತರ ಪ್ರಮುಖ ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. 

ವಿಶ್ವದ ಅತ್ಯಾಧುನಿಕ ಅಪಾಚಿ ಎಂಹೆಚ್-60 ಹೆಲಿಕಾಪ್ಟರ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ.ಇದರಿಂದಾಗಿ ಭಾರತೀಯ ಸೇನೆಗೆ ನೂರಾನೆ ಬಲ ಬಂದಂತಾಗಿದೆ. ಇದಲ್ಲದೇ, ಮಾನಸಿಕ ಆರೋಗ್ಯ ಕುರಿತ ದ್ವೀಪಕ್ಷಿಯ ಒಪ್ಪಂದ, ಆರೋಗ್ಯ ಉಪಕರಣಗಳ ರಕ್ಷಣೆ ಹಾಗೂ ತೈಲಕ್ಷೇತ್ರದಲ್ಲಿ ಸಹಕಾರ ಕುರಿತ ದ್ವಿಪಕ್ಷೀಯ ಒಪ್ಪಂದವೇರ್ಪಟ್ಟಿದೆ.

ನವದೆಹಲಿಯ  ಹೈದ್ರಾಬಾದ್ ಹೌಸ್ ನಲ್ಲಿಂದು  ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದಗಳ ಕುರಿತು ಮಾಹಿತಿ ನೀಡಿದರು

ಪಾಕಿಸ್ತಾನದಿಂದ ನೆಲದಿಂದ ಉಂಟಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸಲು ಉಭಯ ದೇಶಗಳು ಜಂಟಿ ಹೋರಾಟ ನಡೆಸಲು ಮಾತುಕತೆ ನಡೆಸಲಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ ಟ್ರಂಪ್, ಭಾರತದಲ್ಲಿನ ಅತಿಥ್ಯಕ್ಕೆ ನಾವು ಮಾರುಹೋಗಿದ್ದೇವೆ. ತುಂಬು ಹೃದಯದಿಂದ ತಮ್ಮನ್ನು ಸ್ವಾಗತಿಸಿದ ಜನತೆಗೆ ಧನ್ಯವಾದ ಆರ್ಪಿಸುವುದಾಗಿ ತಿಳಿಸಿದರು. 

ರಕ್ಷಣೆ ಮತ್ತು ಭದ್ರತೆ, ಇಂಧನ ಕ್ಷೇತ್ರಗಳಲ್ಲಿ ಸಹಭಾಗಿತ್ವ ಕಾರ್ಯತಂತ್ರ , ವ್ಯಾಪಾರ ಮತ್ತಿತರ ಅಮೆರಿಕಾ- ಭಾರತ ಸಹಭಾಗಿತ್ವದ ಪ್ರತಿಯೊಂದು ಅಂಶದ ಬಗ್ಗೆ ಚರ್ಚೆ ನಡೆಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ಬಲಪಡಿಸುವಿಕೆ ಪ್ರಮುಖವಾದ ಅಂಶವಾಗಿದೆ ಎಂದು ಅವರು ತಿಳಿಸಿದರು.ಭಾರತ-  ಅಮೆರಿಕಾ ನಡುವಣ  ಬಾಂಧವ್ಯ   21 ನೇ ಶತಮಾನ  ಪ್ರಮುಖ ಸಹಭಾಗಿತ್ವ  ಎಂದು ಬಣ್ಣಿಸಿದರು.

ಭಾರತ ಹಾಗೂ ಅಮೆರಿಕಾ ನಡುವೆ ವಿಶೇಷವಾದ ಬಾಂಧವ್ಯವಿದೆ.ಅಮೆರಿಕಾದಲ್ಲಿನ ವೃತ್ತಿಪರರು, ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು ಇದಕ್ಕೆ ಪ್ರಮುಖವಾದ ಕೊಡುಗೆ ನೀಡಿದ್ದಾರೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಸಚಿವರು ಸಕಾರಾತ್ಮಕ ಮಾತುಕತೆ ನಡೆಸಿದ್ದಾರೆ.ವ್ಯಾಪಾರ ಮಾತುಕತೆಗೆ ಸಂಬಂಧಿಸಿದಂತೆ ಕಾನೂನು ಮಾನ್ಯತೆ ನೀಡಲು ನಿರ್ಧರಿಸಿದ್ದೇವೆ. ಉಭಯ ದೇಶಗಳ ನಡುವೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಒಪ್ಪಿಕೊಂಡಿರುವುದಾಗಿ ನರೇಂದ್ರ ಮೋದಿ ತಿಳಿಸಿದರು.

ಭಯೋತ್ಪಾದಕತೆ ಬೆಂಬಲಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ- ಅಮೆರಿಕಾ ಚರ್ಚೆ ನಡೆಸಿರುವುದಾಗಿ ಹೇಳಿದ ನರೇಂದ್ರ ಮೋದಿ, ಮುಕ್ತ, ಪಾರದರ್ಶಕ ವ್ಯಾಪಾರಕ್ಕೆ ಒಪ್ಪಂದ, ಡ್ರಗ್ಸ್ ದಂದೆ ನಿಯಂತ್ರಣಕ್ಕೆ ಒಪ್ಪಂದ ಸೇರಿದಂತೆ ಹಲವು ಒಪ್ಪಂದವೇರ್ಪಟ್ಟಿದ್ದು, ಅಮೆರಿಕ- ಭಾರತದ ಸಂಬಂಧ ಹೊಸ ಘಟ್ಟ ತಲುಪಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com