ಹಂದಿ ಜ್ವರದಿಂದ ಬಳಲುತ್ತಿರುವ ಸುಪ್ರೀಂ ಕೋರ್ಟ್ ನ 6 ನ್ಯಾಯಾಧೀಶರು: ಮುಖವಾಡ ಧರಿಸಿ ಕೋರ್ಟ್ ಗೆ ಬಂದ ವಕೀಲರು 

ಸುಪ್ರೀಂ ಕೋರ್ಟ್ ನ ಆರು ನ್ಯಾಯಾಧೀಶರು ಹಂದಿ ಜ್ವರದಿಂದ ಬಳಲುತ್ತಿದ್ದು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಂದಿ ಜ್ವರದಿಂದ ಬಳಲುತ್ತಿರುವ ಸುಪ್ರೀಂ ಕೋರ್ಟ್ ನ 6 ನ್ಯಾಯಾಧೀಶರು: ಮುಖವಾಡ ಧರಿಸಿ ಕೋರ್ಟ್ ಗೆ ಬಂದ ವಕೀಲರು 

ನವದೆಹಲಿ:ಸುಪ್ರೀಂ ಕೋರ್ಟ್ ನ ಆರು ನ್ಯಾಯಾಧೀಶರು ಹಂದಿ ಜ್ವರದಿಂದ ಬಳಲುತ್ತಿದ್ದು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಆರು ಮಂದಿ ಸಹೋದ್ಯೋಗಿಗಳಿಗೆ ಹೆಚ್ 1ಎನ್ 1 ವೈರಸ್ ತಗುಲಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರೊಂದಿಗೆ ಸಭೆ ನಡೆಸಿ ಪರಾಮರ್ಶಿಲಾಗುವುದು ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ,


ಮುಖವಾಡ ಧರಿಸಿ ಬಂದ ನ್ಯಾಯಾಧೀಶರು: ಆರು ಮಂದಿ ನ್ಯಾಯಾಧೀಶರಿಗೆ ಹಂದಿಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಂದು ಕೋರ್ಟ್ ಗೆ ಉಳಿದ ನ್ಯಾಯಾಧೀಶರು ಮುಖವಾಡ ಧರಿಸಿಕೊಂಡು ಬಂದಿದ್ದು ಕಂಡುಬಂತು. ಉಳಿದ ನ್ಯಾಯಾಧೀಶರಿಗೆ ಸೋಂಕು ಕಾಣಿಸಿಕೊಳ್ಳದಂತೆ ಸುಪ್ರೀಂ ಕೋರ್ಚ್ ನಲ್ಲಿ ಚುಚ್ಚುಮದ್ದು ಸಿಗುವ ಸೌಕರ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು. 

ಈ ಸೋಂಕಿನ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ನ್ಯಾಯಾಧೀಶರು, ವಕೀಲರು, ವಕೀಲರ ಸಂಘದವರು ತೆಗೆದುಕೊಳ್ಳಬೇಕೆಂದು ಹೇಳಿದರು. ಹಂದಿ ಜ್ವರ ಕಾಣಿಸಿಕೊಂಡ ನ್ಯಾಯಾಧೀಶರಲ್ಲಿ ಇಬ್ಬರು ಶಬರಿಮಲೆ ತೀರ್ಪು ಕೇಸಿನ ವಿಚಾರಣೆಯಲ್ಲಿದ್ದು ಅವರು ರಜೆಯಲ್ಲಿರುವುದರಿಂದ ವಿಚಾರಣೆ ವಿಳಂಬವಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com