ದಶಕಗಳಿಂದ ಸರ್ಕಾರಿ ಬಂಗಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು!

ಸರ್ಕಾರಿ ಸೌಲಭ್ಯಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುವ ಆರೋಪ ಹಿಂದಿನಿಂದಲೂ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಇಬ್ಬರು ಸಂಸದರು, 9 ಮಾಜಿ ಸಂಸದರು, 576 ಮಂದಿ ಇತರ ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ನೀಡುವ ಅಧಿಕೃತ ನಿವಾಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.
ಕೆ ಸಿ ರಾಮಮೂರ್ತಿ
ಕೆ ಸಿ ರಾಮಮೂರ್ತಿ

ನವದೆಹಲಿ: ಸರ್ಕಾರಿ ಸೌಲಭ್ಯಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುವ ಆರೋಪ ಹಿಂದಿನಿಂದಲೂ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಇಬ್ಬರು ಸಂಸದರು, 9 ಮಾಜಿ ಸಂಸದರು, 576 ಮಂದಿ ಇತರ ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ನೀಡುವ ಅಧಿಕೃತ ನಿವಾಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅದರಲ್ಲೂ ಕೆಲವರು ಹತ್ತಿಪ್ಪತ್ತು ವರ್ಷಗಳಿಂದ ಅಲ್ಲಿಯೇ ಉಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 


ಇದರಿಂದ ಸಾರ್ವಜನಿಕ ಹಣ ದುರುಪಯೋಗವಾಗುತ್ತದೆ ಎಂದು ವಸತಿ ಸಚಿವಾಲಯ ತಯಾರು ಮಾಡಿರುವ ಆಂತರಿಕ ವರದಿಯಿಂದ ಇದು ಬಹಿರಂಗಗೊಂಡಿದೆ. ಕಾನೂನು ಮತ್ತು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲು ಸಿದ್ದಪಡಿಸಿದ ಆಂತರಿಕ ವರದಿ ಇದಾಗಿದೆ.


ಕೆಲವರು 1998ರಿಂದಲೂ, ಇನ್ನು ಕೆಲವರು 2000, 2001, 2003, 2005ರಿಂದಲೂ ಸರ್ಕಾರಿ ನಿವಾಸಗಳಲ್ಲಿ ನೆಲೆಸಿದ್ದಾರೆ. 9 ಕುಟುಂಬಗಳು ಸರ್ಕಾರದ ಫ್ಲಾಟ್ ಗಳಲ್ಲಿ ದಶಕಗಳಿಂದಲೂ ಹೆಚ್ಚು ಸಮಯದಿಂದ ನೆಲೆಸಿದ್ದಾರೆ. ಮತ್ತೆ 9 ಮಂದಿ ಸರ್ಕಾರದ ಫ್ಲಾಟ್ ಗಳಲ್ಲಿ ದಶಕದಿಂದ ಅಕ್ರಮವಾಗಿ ನೆಲೆಸಿದ್ದು, ಪ್ರತಿಯೊಬ್ಬರೂ 50 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ.


ನಿವೃತ್ತ ಅಧಿಕಾರಿಗಳಾದ ವಿ ಪಿ ರಾವ್ ದೆಹಲಿಯ ರಾಜ್ ಪುರ್ ರಸ್ತೆಯಲ್ಲಿ ಅಕ್ರಮವಾಗಿ ಬಂಗಲೆಯಲ್ಲಿ ನೆಲೆಸಿದ್ದು 95 ಲಕ್ಷಕ್ಕೂ ಹೆಚ್ಚು ಬಾಡಿಗೆ ಉಳಿಸಿಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಅಧಿಕಾರಿ ಆರ್ ಕೆ ಸ್ವಾಮಿ 2001ರಲ್ಲಿ ನಿವೃತ್ತಿ ಹೊಂದಿದ್ದರು. ವಿಕಾಸ್ಪುರಿಯಲ್ಲಿ ಸರ್ಕಾರಿ ಮನೆಯಲ್ಲಿ ಅಕ್ರಮವಾಗಿ ನೆಲೆಸಿದ್ದು 74 ಲಕ್ಷ ರೂಪಾಯಿ ಬಾಡಿಗೆ ಪಾವತಿಸಬೇಕಾಗಿದೆ.


ಇಬ್ಬರು ಸಂಸದರು, 9 ಮಾಜಿ ಸಂಸದರು ದೆಹಲಿಯ ಲುತ್ಯೆನ್ಸ್ ನಲ್ಲಿ ಅಕ್ರಮವಾಗಿ ಬಂಗಲೆಗಳಲ್ಲಿ ನೆಲೆಸಿದ್ದು ಅವರಿಗೆ ತೆರವು ಮಾಡುವಂತೆ ನೊಟೀಸ್ ನೀಡಲಾಗಿದೆ. ಕಳೆದ ವರ್ಷ 16ನೇ ಲೋಕಸಭೆ ವಿಸರ್ಜನೆಯಾದ ನಂತರವೂ ಸಹ ಇವರೆಲ್ಲ ನೆಲೆಸಿದ್ದಾರೆ.
ಲೋಕಸಭಾ ಸದಸ್ಯೆ ವೀಣಾ ದೇವಿ 6ನೇ ವಿಧದ ಬಂಗಲೆಯಲ್ಲಿ ದೆಹಲಿಯ ತಿಲಕ್ ನಗರದಲ್ಲಿ ನೆಲೆಸಿದ್ದಾರೆ, ಇನ್ನು ರಾಜ್ಯ ಸಭಾ ಸದಸ್ಯ ಕೆ ಸಿ ರಾಮಮೂರ್ತಿ ಅವರು ಸಹ ಸರ್ಕಾರಿ ಬಂಗಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com