ದೆಹಲಿ ಹಿಂಸಾಚಾರದ ಎಫೆಕ್ಟ್: ಐದು ಪೊಲೀಸ್ ಅಧಿಕಾರಿಗಳ ವರ್ಗಾವಣೆ

ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರು ಐವರ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರು ಐವರ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರು ಇನ್ನು ಕೇವಲ ಮೂರು ದಿನಗಳಲ್ಲಿ ನಿವೃತ್ತಿಯಾಗುತ್ತಿದ್ದು, ಈ ಸಂದರ್ಭದಲ್ಲಿ ನಡೆದ ದೆಹಲಿ ಹಿಂಸಾಚಾರದ ಹಿನ್ನಲೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. 

ಮೂಲಗಳ ಪ್ರಕಾರ ದೆಹಲಿಯ ರೋಹಿಣಿ ಪ್ರದೇಶದ ಹೆಚ್ಚುವರಿ ಆಯುಕ್ತರಾಗಿದ್ದ ಎಸ್. ಡಿ. ಮಿಶ್ರಾ ಅವರನ್ನು ಸಂಚಾರಿ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ದೆಹಲಿ ಪೊಲೀಸ್ ವಕ್ತಾರರಾದ ಎಂ.ಎಸ್.ರಾಂಧವ ಅವರನ್ನು ಹೆಚ್ಚುವರಿ ಆಯುಕ್ತರು(ಕ್ರೈಮ್ ) ಆಗಿ ನೇಮಿಸಲಾಗಿದೆ. ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿ ತೆರಳಬೇಕಿದ್ದ ಪೊಲೀಸ್ ಉಪ ಆಯುಕ್ತ ಪಿ ಮಿಶ್ರಾ ಅವರನ್ನು ರೋಹಿಣಿ ಪ್ರದೇಶದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಅಂತೆಯೇ ಐಜಿಐ (ಇಂದಿರಾಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ಗೆ ವರ್ಗವಾಗಬೇಕಿದ್ದ ಐಪಿಎಸ್ ಅಧಿಕಾರಿ ಸಂಜಯ್ ಭಾಟಿಯಾ ಅವರನ್ನು ಕೇಂದ್ರ ದೆಹಲಿ ವಿಭಾಗಕ್ಕೆ ಡಿಸಿಪಿಯಾಗಿ ವರ್ಗ ಮಾಡಲಾಗಿದ್ದು, ಸ್ಚಾಫ್ ಆಫೀಸರ್ ಆಗಿದ್ದ ಸಂಜೀವ್ ರಂಜನ್ ಅವರನ್ನು ಐಜಿಐ ವಿಮಾನ ನಿಲ್ದಾಣಕ್ಕೆ ಡಿಸಿಪಿಯಾಗಿ ವರ್ಗಾವಣೆ ಮಾಡಿ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಆದೇಶ ಹೊರಡಿಸಿದ್ದಾರೆ.

ಇನ್ನು ದೆಹಲಿಯ ಹಿಂಸಾಚಾರದ ಕುರಿತು ನಿಗಾ ವಹಿಸಲು ಹಿರಿಯ ಐಪಿಎಸ್ ಅಧಿಕಾರಿ ಎಸ್.ಎನ್. ಶ್ರೀವಾತ್ಸವ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com