ದೆಹಲಿ ಹಿಂಸಾಚಾರ: 106 ಜನರ ಬಂಧನ; 18 ಎಫ್ಐಆರ್, ಸಾವಿನ ಸಂಖ್ಯೆ 27 ಕ್ಕೆ ಏರಿಕೆ  

ಹಿಂಸಾಚಾರ, ಕೋಮುಗಲಭೆ ಸ್ವರೂಪ ಪಡೆದಿರುವ ಸಿಎಎ ವಿರೋಧಿ ಪ್ರತಿಭಟನೆಗೆ ಬಲಿಯಾಗಿರುವವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. 
ದೆಹಲಿ ಹಿಂಸಾಚಾರ: 106 ಜನರ ಬಂಧನ; 18 ಎಫ್ಐಆರ್, ಸಾವಿನ ಸಂಖ್ಯೆ 27 ಕ್ಕೆ ಏರಿಕೆ
ದೆಹಲಿ ಹಿಂಸಾಚಾರ: 106 ಜನರ ಬಂಧನ; 18 ಎಫ್ಐಆರ್, ಸಾವಿನ ಸಂಖ್ಯೆ 27 ಕ್ಕೆ ಏರಿಕೆ

ನವದೆಹಲಿ: ಹಿಂಸಾಚಾರ, ಕೋಮುಗಲಭೆ ಸ್ವರೂಪ ಪಡೆದಿರುವ ಸಿಎಎ ವಿರೋಧಿ ಪ್ರತಿಭಟನೆಗೆ ಬಲಿಯಾಗಿರುವವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. 

ಪೊಲೀಸರು ಗಲಭೆಕೋರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಿಂಸಾಚಾರ ಘಟನೆ ಸಂಬಂಧ ಪೊಲೀಸರು ಈ ವರೆಗೂ 18 ಎಫ್ಐಆರ್ ಗಳನ್ನ ದಾಖಲಿಸಿದ್ದು, 106 ಜನರನ್ನು ಬಂಧಿಸಿದ್ದಾರೆ. 
 
ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು ಫೆ.26 ರಂದು ಅಹಿತಕರ ಘಟನೆಗಳು ಸಂಭವಿಸಿಲ್ಲ. ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್)ಗೆ ಬರುವ ಕರೆಗಳ ಸಂಖ್ಯೆ ಇಳಿಮುಖವಾಗಿದೆ -ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಮನ್ ದೀಪ್ ಸಿಂಗ್ ರಾಂಧವಾ ಹೇಳಿದ್ದಾರೆ. 

ಪೊಲೀಸರು ಹೆಲ್ಪ್ ಲೈನ್ ನಂಬರ್ ಗಳನ್ನು ನೀಡಿದ್ದು - 011-22829334, 22829335 ಸಂಕಷ್ಟದ ಸಮಯದಲ್ಲಿ ಸಂಪರ್ಕಿಸಲು ಸೂಚಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com