ದೆಹಲಿ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆಗಿ ರಾಖಿ ಬಿರ್ಲಾ ಆಯ್ಕೆ

ದೆಹಲಿ ವಿಧಾನಸಭೆಯ ಡೆಪ್ಯೂಟಿ ಸ್ವೀಕರ್ ಆಗಿ ಆಮ್ ಆದ್ಮಿ ಪಕ್ಷ(ಎಎಪಿ)ದ ಶಾಸಕಿ ರಾಖಿ ಬಿರ್ಲಾ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಖಿ ಬಿರ್ಲಾ
ರಾಖಿ ಬಿರ್ಲಾ

ನವದೆಹಲಿ: ದೆಹಲಿ ವಿಧಾನಸಭೆಯ ಡೆಪ್ಯೂಟಿ ಸ್ವೀಕರ್ ಆಗಿ ಆಮ್ ಆದ್ಮಿ ಪಕ್ಷ(ಎಎಪಿ)ದ ಶಾಸಕಿ ರಾಖಿ ಬಿರ್ಲಾ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಡೆಪ್ಯೂಟ್ ಸ್ಪೀಕರ್ ಹುದ್ದೆಗೆ ಮಂಗೊಲ್ ಪುರಿ ಕ್ಷೇತ್ರದ ಶಾಸಕಿ ರಾಖಿ ಬಿರ್ಲಾ ಅವರನ್ನು ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಅವಿರೋಧವಾಗಿ ಬಿರ್ಲಾ ಅವರನ್ನು ಆಯ್ಕೆ ಮಾಡಲಾಯಿತು.

ಎರಡನೇ ಅವಧಿಗೆ ತಮ್ಮನ್ನು ಡೆಪ್ಯೂಟ್ ಸ್ಪೀಕರ್ ಆಗಿ ಆಯ್ಕೆ ಮಾಡಿದ ವಿಧಾಸಭೆಯ ಎಲ್ಲಾ ಸದಸ್ಯರಿಗೆ ರಾಖಿ ಬಿರ್ಲಾ ಅವರು ಧನ್ಯವಾದ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com