ಕೋಲ್ಕತಾ: ಪರೀಕ್ಷೆಗೆ ಪ್ರವೇಶ ಪತ್ರ ಮರೆತುಬಂದ ವಿದ್ಯಾರ್ಥಿನಿ, 5 ಕಿ.ಮೀ. ಪ್ರಯಾಣಿಸಿ ತಂದುಕೊಟ್ಟ ಪೊಲೀಸರು!

ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಿಕ(10ನೇ ತರಗತಿ) ಪರೀಕ್ಷೆಗೆ ಪ್ರವೇಶ ಪತ್ರ ತರುವುದನ್ನು ಮರೆತಿದ್ದರು. ಆದರೆ, ಕೋಲ್ಕತಾ ಸಂಚಾರಿ ಪೊಲೀಸರು ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದರಿಂದ ಆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತಾ: ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಿಕ(10ನೇ ತರಗತಿ) ಪರೀಕ್ಷೆಗೆ ಪ್ರವೇಶ ಪತ್ರ ತರುವುದನ್ನು ಮರೆತಿದ್ದರು. ಆದರೆ, ಕೋಲ್ಕತಾ ಸಂಚಾರಿ ಪೊಲೀಸರು ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದರಿಂದ ಆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಸೋಮವಾರ ಮಾಧ್ಯಮಿಕ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿನಿ ಪ್ರವೇಶ ಪತ್ರ ತರದೆ ಇರುವುದರಿಂದ ಆಕೆಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.

ಸುಮನ್ ಕುರ್ರೆ ಎಂಬ ವಿದ್ಯಾರ್ಥಿನಿ ತನ್ನ ಪ್ರವೇಶ ಪತ್ರವನ್ನು ಮನೆಯಲ್ಲಿಯೇ ಬಿಟ್ಟುಬಂದಿದ್ದಳು. ಹೀಗಾಗಿ ಆಕೆಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಈ ವೇಳೆ ಸ್ಥಳದಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸ್  ಸೆರ್ಜೆಂಟ್ ಚೈತನ್ಯ ಮಲ್ಲಿಕ್ ಅವರ ಬಳಿ ವಿದ್ಯಾರ್ಥಿ ತನ್ನ ಅಳಲು ತೋಡಿಕೊಂಡಿದ್ದಾಳೆ.

ವಿದ್ಯಾರ್ಥಿನಿ ಮನೆ ಪರೀಕ್ಷಾ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದ್ದು, ಕೂಡಲೇ ವಿದ್ಯಾರ್ಥಿನಿ ತಾಯಿಯನ್ನು ಸಂಪರ್ಕಿಸಿದ ಸೆರ್ಜೆಂಟ್ ಮಲ್ಲಿಕ್ ಅವರು, ಅವರ ಮನೆಗೆ ತೆರಳಿ ಪ್ರವೇಶ ಪತ್ರವನ್ನು ತಂದು ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com