ದೆಹಲಿ ಗಲಭೆ: ಅಲ್ಪಸಂಖ್ಯಾತರ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳನ್ನು ರಕ್ಷಿಸಿದ ನೆರೆಮನೆಯ ಮುಸ್ಲಿಮರು! 

ಹೌದು ನಾವು ಹೆದರಿದ್ದೆವು ‘ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು, ಭಯ ಹುಟ್ಟಿಸುವಂತಿತ್ತು. ಆದರೆ ಸ್ಥಳೀಯರು (ಮುಸ್ಲಿಮರು) ನಮಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದರು ಎನ್ನುತ್ತಾರೆ ದೆಹಲಿಯ ಮುಸ್ತಫಾಬಾದ್ ನ ನಿವಾಸಿ ವಿಮಲೇಶ್.
ದೆಹಲಿ ಗಲಭೆ: ಅಲ್ಪಸಂಖ್ಯಾತರ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳನ್ನು ರಕ್ಷಿಸಿದ ನೆರೆಮನೆಯ ಮುಸ್ಲಿಮರು!
ದೆಹಲಿ ಗಲಭೆ: ಅಲ್ಪಸಂಖ್ಯಾತರ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳನ್ನು ರಕ್ಷಿಸಿದ ನೆರೆಮನೆಯ ಮುಸ್ಲಿಮರು!

ನವದೆಹಲಿ: ಹೌದು ನಾವು ಹೆದರಿದ್ದೆವು ‘ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು, ಭಯ ಹುಟ್ಟಿಸುವಂತಿತ್ತು. ಆದರೆ ಸ್ಥಳೀಯರು (ಮುಸ್ಲಿಮರು) ನಮಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದರು ಎನ್ನುತ್ತಾರೆ ದೆಹಲಿಯ ಮುಸ್ತಫಾಬಾದ್ ನ ನಿವಾಸಿ ವಿಮಲೇಶ್.

ಈಶಾನ್ಯ ದೆಹಲಿಯಲ್ಲಿ ಉಂಟಾಗಿದ್ದ ಗಲಭೆಗೆ ಈ ವರೆಗೂ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಕೋಮುಸೌಹಾರ್ದ ಕಾಯ್ದುಕೊಂಡು ನೆರೆಯಲ್ಲಿರುವ ಮುಸ್ಲಿಮರು-ಹಿಂದೂಗಳು ಪರಸ್ಪರ ರಕ್ಷಣೆಗೆ ಧಾವಿಸಿದ್ದಾರೆ. 

ಘರ್ಷಣೆ ಹೆಚ್ಚಾದಂತೆಯೇ ಮುಸ್ಲಿಮ್ ಸಹೋದರರು ಹಿಂದೂಗಳ ಮನೆ ಮುಂದೆ ನಿಂತು ರಕ್ಷಣೆ ನೀಡಿದರು.  ಉದ್ವಿಗ್ನಗೊಂಡ ಗುಂಪು ನಮ್ಮ ಮನೆಗೆ ನುಗ್ಗಿ ಕೊಲ್ಲಲು ಯತ್ನಿಸಿದರು. ಆದರೆ ಆ ಗುಂಪನ್ನು ಎದುರಿಸಿ, ಸಮಾಧಾನ ಮಾಡಿ ವಾಪಸ್ ಕಳಿಸಿದರು ಎಂದು ವಿಮಲೇಶ್ ಅವರ ನೆರೆಮನೆಯ ವ್ಯಕ್ತಿ ಭಾರ್ತಿ ಹೇಳಿದ್ದಾರೆ. 

ಬ್ರಿಜ್ ಪುರ್, ಮುಸ್ತಫಾಬಾದ್, ಶಿವ್ ವಿವಾರ್ ಪ್ರದೇಶಗಳು ಕೋಮು ಹಿಂಸಾಚಾರಕ್ಕೆ ತುತ್ತಾಗಿದ್ದವು. ಬ್ರಿಜ್ ಪುರಿ ಶಿವ್ ವಿವಾರ್ ಹಿಂದೂ ಬಾಹುಳ್ಯವಿರುವ ಪ್ರದೇಶಗಳಾದರೆ, ಮುಸ್ತಫಾಬಾದ್ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಾಗಿವೆ.

ಗುಂಪಿನ ದ್ವೇಷ, ಆಕ್ರೋಶಗಳ ನಡುವೆಯೂ ಮುಸ್ಲಿಂ ಸಹೋದರರು ನಮ್ಮ ಬೆನ್ನಿಗೆ ನಿಂತರು ಹಾಗೂ ಗುಂಪಿನ ಉದ್ದೇಶ ಈಡೇರಲು ಬಿಡದೇ ಇಡೀ ರಾತ್ರಿ ನಮ್ಮ ಮನೆಗಳಿಗೆ ಕಾವಲು ನಿಂತಿದ್ದರು. ಇಂತಹ ನೆರೆಯವರು ಇರುವುದಕ್ಕೆ ಅದೃಷ್ಟ ಮಾಡಿದ್ದೆವು ಎಂದು 1960 ರಿಂದ ಮುಸ್ತಫಾಬಾದ್ ನಲ್ಲಿರುವ ದಶರಥ್ ಹೇಳಿದ್ದಾರೆ.

ನಾನು ಹುಟ್ಟಿದ್ದು ಮುಸ್ತಫಾಬಾದ್ ನಲ್ಲಿ ನನ್ನ ಕುಟುಂಬ ಇಲ್ಲೇ ಜೀವಿಸುತ್ತದೆ. ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವಾದರೂ ನಮಗೆ ಎಂದಿಗೂ ಅಭದ್ರತೆ ಕಾಡಿಲ್ಲ. ನನ್ನ ಮುಸ್ಲಿಂ ನೆರೆಯವರನ್ನು ನಾನು ನಂಬುತ್ತೇವೆ ಎಂದು ಹರಿಕಾಂತ್ ಶರ್ಮ ಹೇಳಿದ್ದಾರೆ.  

ಕೇವಲ ನೆರೆಮನೆಯವರನ್ನಷ್ಟೇ ಅಲ್ಲದೇ ಸ್ಥಳೀಯ ಮುಸ್ಲಿಮರು ದೇವಾಲಯಗಳನ್ನೂ ಹಾನಿಯಿಂದ ರಕ್ಷಣೆ ನೀಡಿದ್ದಾರೆ. ಕೋಮುಗಲಭೆ ಪ್ರಾರಂಭವಾದಾಗ ಹಿಂದೂಗಳ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿತ್ತು. ನಮಗೆ ಹಿಂದೂಗಳ ರಕ್ಷಣೆ ಮುಖ್ಯವಾಗಿತ್ತು. ನನ್ನ ಸಮುದಾಯದಿಂದ ನಾನು ಗುಂಡಿಕ್ಕಿಸಿಕೊಳ್ಳಲು ಸಿದ್ಧನಿದ್ದೇನೆ ಆದರೆ ಹಿಂದೂ ಕುಟುಂಬಗಳಿಗೆ ಯಾವುದೇ ಹಾನಿಯಾಗಬಾರದು ಎನ್ನುತ್ತಾರೆ ಮುಸ್ತಫಾಬಾದ್ ನ ಆದೀಮ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com