ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ವಿರುದ್ದ ಎಫ್ ಐ ಆರ್ 

ಚುನಾವಣಾ ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಅವರ ವಿರುದ್ಧ ದೂರು ದಾಖಲಾಗಿದೆ. ಬಿಹಾರ್ ಕಿ ಬಾತ್ ಪ್ರಚಾರದ ವೇಳೆ  ಕೃತಿ ಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಪಾಟ್ನಾ:  ಚುನಾವಣಾ ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಅವರ ವಿರುದ್ಧ ದೂರು ದಾಖಲಾಗಿದೆ. ಬಿಹಾರ್ ಕಿ ಬಾತ್ ಪ್ರಚಾರದ ವೇಳೆ  ಕೃತಿ ಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಬಿಜೆಪಿಯಿಂದ ಹೊರಬಿದ್ದು ನಂತರ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ) ಪಕ್ಷ ಸೇರಿದ್ದರು. ಮುಖ್ಯಮಂತ್ರಿ ನಿತೀಶ್ ಅವರನ್ನು ನೇರವಾಗಿಯೇ ಟೀಕಿಸಲು ಆರಂಭಿಸಿದ್ದ ಪ್ರಶಾಂತ್ ಅವರು ಆ ಪಕ್ಷದಿಂದಲೂ ವಜಾಗೊಂಡಿದ್ದರು.

ಬಳಿಕ 'ಬಾತ್ ಬಿಹಾರ್ ಕಿ' ಎಂಬ ಕಾರ್ಯಕ್ರಮದ ಮೂಲಕ 10 -15 ವರ್ಷಗಳಲ್ಲಿ ಬಿಹಾರವನ್ನು ಅತ್ಯಂತ ಮುಂದುವರಿದ ರಾಜ್ಯಗಳ ಸ್ಥಾನಕ್ಕೆ ತರುವುದೇ ನನ್ನ ಗುರಿ ಇದಕ್ಕಾಗಿ ಯುವಕರು, ವಿದ್ಯಾವಂತ ಯುವಕರು ಕೈಜೋಡಿಸಬೇಕೆಂದು ಪ್ರಚಾರ ನಡೆಸಿದ್ದರು.

ಶಾಶ್ವತ್ ಗೌತಮ್ ಎಂಬುವರು ತಮ್ಮ ದೂರಿನಲ್ಲಿ, ಒಸಾಮ ಎಂಬಾತ ನನ್ನ ಸ್ನೇಹಿತನಾಗಿದ್ದ, ಆತ ಕೆಲ ವರ್ಷಗಳ ಹಿಂದೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆತನಿಗೆ ನಾನೇ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದೆ.

ಈಗ ಒಸಾಮಾ ಪ್ರಶಾಂತ್ ಕಿಶೋರ್‌‍‌ಗೆ ಈ ಕಾರ್ಯಕ್ರಮದ ಮೂಲವನ್ನು ನಕಲು ಮಾಡಿ ಕೊಟ್ಟಿದ್ದಾನೆ. ಆತನ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಶಾಶ್ವತ್ ಗೌತಮ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕಾದಲ್ಲಿ ವ್ಯಾಸಂಗ ಮಾಡಿ ಬಿಹಾರಕ್ಕೆ ಹಿಂದಿರುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com