ಸಾರ್ವಕರ್ ಬಗ್ಗೆ ಬಿಜೆಪಿ, ಆರ್ ಎಸ್ ಎಸ್ ತೋರಿಸುವುದು ನಕಲಿ ಪ್ರೀತಿ: ಶಿವಸೇನೆ

ಮಹಾ ವಿಕಾಸ್ ಆಘಾದಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದಕ್ಕೆ  ಕೇಸರಿ ಪಕ್ಷವನ್ನು ಟೀಕಿಸಿರುವ ಆಡಳಿತರೂಢ ಶಿವಸೇನಾ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ವಿನಾಯಕ ದಾಮೋದರ್ ಸಾರ್ವಕರ್  ಅವರ ಬಗ್ಗೆ ಬಿಜೆಪಿ, ಆರ್ ಎಸ್ ತೋರಿಸುವುದು ನಕಲಿ ಪ್ರೀತಿ ಎಂದು ವಾಗ್ದಾಳಿ ನಡೆಸಿದೆ.
ಸಾರ್ವಕರ್
ಸಾರ್ವಕರ್

ಮುಂಬೈ: ಮಹಾ ವಿಕಾಸ್ ಆಘಾದಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದಕ್ಕೆ  ಕೇಸರಿ ಪಕ್ಷವನ್ನು ಟೀಕಿಸಿರುವ ಆಡಳಿತರೂಢ ಶಿವಸೇನಾ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ವಿನಾಯಕ ದಾಮೋದರ್ ಸಾರ್ವಕರ್  ಅವರ ಬಗ್ಗೆ ಬಿಜೆಪಿ, ಆರ್ ಎಸ್ ತೋರಿಸುವುದು ನಕಲಿ ಪ್ರೀತಿ ಎಂದು ವಾಗ್ದಾಳಿ ನಡೆಸಿದೆ.

ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಬಿಜೆಪಿ ಏಲ್ಲಿ ಇತ್ತು? ಭಾರತ ಸ್ವಾತಂತ್ರ್ಯ ಗಳಿಸಿದಾಗ ಆರ್ ಎಸ್ ಎಸ್ ನ್ನು ಸರ್ದಾರ್ ಪಟೇಲ್ ಎರಡು ಬಾರಿ ನಿಷೇಧಿಸಿದ್ದರು. ಆ ಸಂದರ್ಭದಲ್ಲಿ ಆರ್ ಎಸ್ ಎಸ್ ತನ್ನ ಮುಖ್ಯ ಕಚೇರಿಯ ಮೇಲೆ ಧ್ವಜಾರೋಹಣ ಮಾಡಿರಲಿಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ತೀವ್ರವಾಗಿ ಟೀಕಿಸಲಾಗಿದೆ.

ರಾಷ್ಟ್ರ ಧ್ವಜವನ್ನು ಆರ್ ಎಸ್ ಎಸ್ ಕಚೇರಿ ಮೇಲೆ ಹಾರಾಟ ನಡೆಸಬೇಕೆಂಬ ಒಂದು ಷರತ್ತಿನೊಂದಿಗೆ ಸರ್ದಾರ್ ಪಟೇಲ್ ನಿಷೇಧವನ್ನು ತೆಗೆದರು. ಹಾಗೆಯೇ ಮಾಡುತ್ತೇವೆ ಆದರೆ, 2002ರವರೆಗೂ ಸರ್ಕಾರದ ಆದೇಶವನ್ನು ಪಾಲಿಸುವುದಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಗೋಲ್ವಾಲ್ಕರ್  ಬರೆದುಕೊಟ್ಟಿದ್ದರು ಎಂದು ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. 

ಮಹಾ ವಿಕಾಸ್ ಆಘಾದಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿರುವ  ಶಿವಸೇನಾ, ಇದರಲ್ಲಿ ಬಿಜೆಪಿ ಯಶಸ್ವಿಯಾಗುವುದಿಲ್ಲ ಎಂದಿದೆ. ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಿಲ್ಲದವರು ತಮ್ಮನ್ನು ರಾಷ್ಟ್ರ ವಿರೋಧಿಗಳು ಎಂದು ಕರೆದುಕೊಳ್ಳಬೇಕಾಗಿದೆ. ಸಾರ್ವಕರ್ ಅವರನ್ನು ಗುರಾಣಿಯಾಗಿ ಬಿಜೆಪಿ ಬಳಸಬಾರದು, ಶಿವಸೇನಾ ರಾಷ್ಟ್ರಧ್ವಜದಂತೆ ಕೇಸರಿ ಧ್ವಜವನ್ನು ಹಾರಿಸುತ್ತದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.

ಆದಾಗ್ಯೂ, ಮರಾಠಿ ಭಾಷೆ ಬಗ್ಗೆ ಸಾರ್ವಕರ್ ಅವರಿಗೆ ಇದ್ದ ಬದ್ಧತೆಯನ್ನು ಶಿವಸೇನಾ ಶ್ಲಾಘಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com