ಭಯೋತ್ಪಾದಕತೆಗೆ ಬಾಲಾಕೋಟ್ ವಾಯುದಾಳಿ  ಸ್ಪಷ್ಪ ಸಂದೇಶ ರವಾನೆ- ರಾಜನಾಥ್ ಸಿಂಗ್ 

ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸುವ ಮೂಲಕ  ಉಗ್ರಗ್ರಾಮಿಗಳಿಗೆ ಸುರಕ್ಷಿತ  ತಾಣಗಳಾಗಿ ಬಳಸಿಕೊಳ್ಳಲು ಆಗದು ಎಂಬ ಸ್ಪಷ್ಟ ಸಂದೇಶವನ್ನು ಬಾಲಕೋಟ್ ವಾಯು ದಾಳಿ ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸುವ ಮೂಲಕ  ಉಗ್ರಗ್ರಾಮಿಗಳಿಗೆ ಸುರಕ್ಷಿತ  ತಾಣಗಳಾಗಿ ಬಳಸಿಕೊಳ್ಳಲು ಆಗದು ಎಂಬ ಸ್ಪಷ್ಟ ಸಂದೇಶವನ್ನು ಬಾಲಕೋಟ್ ವಾಯು ದಾಳಿ ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನಮಗೆ ನಿಯೋಜಿಸಲಾಗಿರುವ ಕೆಲಸಗಳನ್ನು ಎದುರಿಸಲು ಯಾವಾಗಲೂ ಸಿದ್ಧರಾಗಿರಬೇಕಾಗುತ್ತದೆ.  ಯಾವುದೇ ಸಂದರ್ಭದಲ್ಲೂ ಎದುರಾಗುವ ತೊಂದರೆಗಳನ್ನು ಎದುರಿಸಲು ಭೂ, ವಾಯು ಹಾಗೂ ನೌಕ ಬಲ ಸನ್ನದ್ಧರಾಗಿ ಇರಬೇಕಾಗುತ್ತದೆ ಎಂದು ಅವರು ವಾಯುಪಡೆ ಅಧ್ಯಯನ ಕೇಂದ್ರದಲ್ಲಿ ತಿಳಿಸಿದರು.

ಬಾಲಕೋಟ್ ವಾಯುದಾಳಿ ದೇಶದ ಶಕ್ತಿ ಹಾಗೂ ಸಾಮರ್ಥ್ಯವನ್ನು ತೋರಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.  ವಿಶ್ವಾಸಾರ್ಹ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ರಾಜಕೀಯ ನಾಯಕರ ಉದ್ದೇಶ ಹಾಗೂ ಮಿಲಿಟರಿ ನಾಯಕತ್ವದ ಪಾತ್ರ ಮಹತ್ವದಿಂದ ಕೂಡಿರುತ್ತದೆ ಎಂದು ಬಿಪಿನ್ ರಾವತ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com