ಪ್ರಧಾನಿ ಮೋದಿ ವಿರುದ್ಧ ಫೇಸ್‍ಬುಕ್‍ನಲ್ಲಿ ''ಅವಹೇಳನಕಾರಿ' ಪೋಸ್ಟ್, ಶಿಕ್ಷಕನನ್ನೇ ಜೈಲಿಗೆ ಹಾಕಿಸಿದ ವಿದ್ಯಾರ್ಥಿ!

ಶಿಕ್ಷಕರೊಬ್ಬರು ತಮ್ಮ ಫೇಸ್ ಬುಕ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ್ದು ಈ ಸಂಬಂಧ ವಿದ್ಯಾರ್ಥಿಯೇ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಗುವಾಹಟಿ: ಶಿಕ್ಷಕರೊಬ್ಬರು ತಮ್ಮ ಫೇಸ್ ಬುಕ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ್ದು ಈ ಸಂಬಂಧ ವಿದ್ಯಾರ್ಥಿಯೇ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ. 

ಕ್ಯಾಚರ್ ಜಿಲ್ಲೆಯ ಸಿಲ್ಚಾರ್ ನಲ್ಲಿರುವ ಗುರುಚರಣ್ ಕಾಲೇಜಿನ ಅತಿಥಿ ಶಿಕ್ಷಕರಾಗಿದ್ದ ಸೌರದೀಪ್ ಸೇನ್ ಗುಪ್ತಾ ಅವರು ದೆಹಲಿ ಹಿಂಸಾಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಎಬಿವಿಪಿ ಸಂಘಟನೆ ದೂರು ನೀಡಿದ್ದು ಈ ಸಂಬಂಧ ಶಿಕ್ಷಕನನ್ನು ಬಂಧಿಸಲಾಗಿದೆ. 

ಶಿಕ್ಷಕನ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸೌರಾದೀಪ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದರು. 

ಹಿಂಬಾಲಕನೊಬ್ಬ ಸೇನ್ ಗುಪ್ತಾರ ಫೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಬಳಸಿ ಸನಾತನ ಧರ್ಮದ ಅನುಯಾಯಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದು ನಂತರ ಶಿಕ್ಷಕನಿಗೆ ತನ್ನ ತಪ್ಪಿನ ಅರಿವಾಗಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com