ಪುಲ್ವಾಮಾ ದಾಳಿಗೆ ನೆರವು ನೀಡಿದ್ದ ಉಗ್ರನ ಬಂಧನ- ಎನ್ ಐಎ ಅಧಿಕಾರಿಗಳು

ರಾಷ್ಟ್ರೀಯ ತನಿಖಾ ದಳ ತನ್ನ ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ ವರ್ಷ ಜೈಷ್ -ಇ- ಮೊಹಮ್ಮದ್ ಸಂಘಟನೆ ಪುಲ್ವಾಮಾದಲ್ಲಿ ನಡೆಸಿದ್ದ ಪೈಶಾಚಿಕ ದಾಳಿಗೆ ನೆರವು ನೀಡಿದ್ದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. 
ರಾಷ್ಟ್ರೀಯ ತನಿಖಾ ದಳ
ರಾಷ್ಟ್ರೀಯ ತನಿಖಾ ದಳ

ನವದೆಹಲಿ:  ರಾಷ್ಟ್ರೀಯ ತನಿಖಾ ದಳ ತನ್ನ ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ ವರ್ಷ ಜೈಷ್ -ಇ- ಮೊಹಮ್ಮದ್ ಸಂಘಟನೆ ಪುಲ್ವಾಮಾದಲ್ಲಿ ನಡೆಸಿದ್ದ ಪೈಶಾಚಿಕ ದಾಳಿಗೆ ನೆರವು ನೀಡಿದ್ದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. 

 ಪುಲ್ವಾಮಾದ ಕಾಕಪೊರದ ಹಾಜಿಬಲ್ ನಿವಾಸಿ   ಶಕೀರ್ ಬಷೀರ್ ಮ್ಯಾಗ್ರೆ (22) ಬಂಧಿತ ಆರೋಪಿ. ಪರ್ನಿಚರ್ ಅಂಗಡಿ ಮಾಲೀಕನಾಗಿರುವ ಈತ ಪುಲ್ವಾಮಾ ದಾಳಿಯ ನೇತೃತ್ವ ವಹಿಸಿದ್ದ ಆತ್ಮಹತ್ಯಾ ಬಾಂಬರ್ ಅದಿಲ್ ಅಹ್ಮದ್ ಡಾರ್ ನಿಗೆ ಆಶ್ರಯ ಮತ್ತಿತರ ನೆರವು ನೀಡಿದ್ದ ಎಂಬುದು ತಿಳಿದುಬಂದಿದೆ.

ಪಾಕಿಸ್ತಾನದ ಉಗ್ರ ಮೊಹಮ್ಮದ್ ಉಮರ್ ಪಾರೂಖ್ 2018ರಲ್ಲಿ ಡಾರ್ ನನ್ನು ಮ್ಯಾಗ್ರೆಗೆ ಪರಿಚಿಸಿದ್ದ. ನಂತರ ಜೆಇಎಂ ಪರ ಗುಪ್ತಚರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. 

ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿರುವವರು ಸೇರಿದಂತೆ ಜೆಎಂ ಉಗ್ರರಿಗೆ  ಶಸ್ತ್ರಾಸ್ತ್ರ, ಮದ್ದುಗುಂಡು, ನಗದು ಮತ್ತು ಸ್ಫೋಟಕ ವಸ್ತುಗಳನ್ನು ಹಲವಾರು ಸಂದರ್ಭಗಳಲ್ಲಿ ಸಂಗ್ರಹಿಸಿ ಪೂರೈಸಿರುವುದಾಗಿ ವಿಚಾರಣೆ ವೇಳೆಯಲ್ಲಿ ಆತ ಬಾಯ್ಬಿಟ್ಟಿದ್ದಾನೆ.

ಲೆತ್ ಪೊರಾ ಸೇತುವೆ ಬಳಿ ಅಂಗಡಿ ಇಟ್ಟುಕೊಂಡಿದ್ದ ಮ್ಯಾಗ್ರೆ, ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಕಳೆದ ವರ್ಷ ಜನವರಿಯಲ್ಲಿ ಬರುತ್ತಿದ್ದ ಸಿಆರ್ ಪಿಎಫ್ ಬೆ ಬೆಂಗಾವಲು ವಾಹನದ ಬಗ್ಗೆ   ಪಾಕ್ ಉಗ್ರ ಮೊಹಮ್ಮದ್ ಉಮರ್ ಫಾರೂಖ್ ಮತ್ತು ಡಾರ್ ನಿಗೆ ಮಾಹಿತಿ ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019 ಫೆಬ್ರವರಿಯಲ್ಲಿ ಮಾರುತಿ ಇಕೊ ಕಾರ್ ವೊಂದಕ್ಕೆ ಐಟಿಡಿ ಸ್ಪೋಟಕ ಇಟ್ಟಿದದ್ದು ತಾನೇ ಎಂದು ಆತ ಒಪ್ಪಿಕೊಂಡಿದ್ದಾನೆ.  ಈ ದಾಳಿಯ ರೂವಾರಿಗಳಾದ ಮೊಹಮ್ಮದ್ ಉಮರ್ ಪಾರೂಖ್ ಹಾಗೂ ಐಇಡಿ ಪರಿಣಿತ ಕಮ್ರಾನ್  ಅವರನ್ನು ಕಳೆದ ವರ್ಷ ಮಾರ್ಚ್ 11 ರಂದು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದ್ದರು. 

ಮ್ಯಾಗ್ರೀಯನ್ನು ಶುಕ್ರವಾರ ಜಮ್ಮುವಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸಮಗ್ರ ವಿಚಾರಣೆಗಾಗಿ 15 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ಒಪ್ಪಿಸಲಾಗಿದೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com