ರಾಜಕೀಯದಿಂದ ದೂರವಿದ್ದು, ಸರ್ಕಾರದ ನಿರ್ದೇಶನವನ್ನಷ್ಟೇ ಪಾಲಿಸುತ್ತೇವೆ: ರಕ್ಷಣಾಪಡೆ ಮುಖ್ಯಸ್ಥ ಬಿಪಿನ್ ರಾವತ್

ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾಪಡೆಗಳು ರಾಜಕೀಯದಿಂದ ದೂರವಿರುತ್ತವೆ ಎಂದು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಪಡೆ ಬಿಪಿನ್ ರಾವತ್ ಅವರು ಹೇಳಿದ್ದಾರೆ. 

Published: 01st January 2020 11:27 AM  |   Last Updated: 01st January 2020 01:41 PM   |  A+A-


CDS Bipin Rawat

ರಕ್ಷಣಾ ಮುಖ್ಯಸ್ಥ ರಾವತ್

Posted By : Manjula VN
Source : The New Indian Express

ನವದೆಹಲಿ: ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾಪಡೆಗಳು ರಾಜಕೀಯದಿಂದ ದೂರವಿರುತ್ತವೆ ಎಂದು ದೇಶದ ಮೊದಲ ರಕ್ಷಣಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ. 

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾವತ್ ಅವರು ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ಸಶಸ್ತ್ರ ಪಡೆಗಳು ದೂರ ಇರಲಿದ್ದು, ಸರ್ಕಾರದ ನಿರ್ದೇಶನಗಳನ್ನು ಮಾತ್ರ ಅನುಸರಿಸುತ್ತವೆ. ರಕ್ಷಣಾ ಇಲಾಖೆ ಮೂರು ಸೇನಾಪಡೆಗಳನ್ನು ಸಂಯೋಜನೆಗೊಳ್ಳುವಂತೆ ಮಾಡಿ, ಒಂದು ತಂಡದಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ರಾಜಕೀಯದಿದ ನಾವು ದೂರ ಇರುತ್ತೇವೆ. ಸರ್ಕಾರ ಹೇಳಿದಂತೆ, ನಿರ್ದೇಶನದಂತೆ ನಡೆಯುತ್ತೇವೆ ಎಂದು ಹೇಳಿದ್ದಾರೆ. 

ಮೂರು ಸೇನಾಪಡೆಗಳಿಗೆ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಉತ್ತಮ ಹಾಗೂ ಸೂಕ್ತ ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸರ್ಕಾರದ ಪರವಾಗಿ ಮಾತನಾಡಿದ್ದ ರಾವತ್ ಅವರ ವಿರುದ್ಧ ಈ ಹಿಂದೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. 

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp