ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ, ರಕ್ಷಣಾ ಮುಖ್ಯಸ್ಥ ರಾವತ್

ಭೂಸೇನಾ ಮುಖ್ಯಸ್ಥ ಮುಕುಂದ್ ನರವಾಣೆ ಹಾಗೂ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಗೌರವ ಸಲ್ಲಿಸಿದರು. 

Published: 01st January 2020 10:16 AM  |   Last Updated: 01st January 2020 10:16 AM   |  A+A-


Army Chief General Manoj Naravane pays tribute at National War Memorial in Delhi

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ, ರಕ್ಷಣಾ ಮುಖ್ಯಸ್ಥ ರಾವತ್

Posted By : Manjula VN
Source : Online Desk

ನವದೆಹಲಿ: ಭೂಸೇನಾ ಮುಖ್ಯಸ್ಥ ಮುಕುಂದ್ ನರವಾಣೆ ಹಾಗೂ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಗೌರವ ಸಲ್ಲಿಸಿದರು. 

ಯುದ್ಧ ಸ್ಮಾರಕ್ಕೆ ನರವಾಣೆಯವರು ಗೌರವ ಸಲ್ಲಿಸಿದ ಬಳಿಕ ಸೇನಾಪಡೆಗಳು ನೂತನ ಮುಖ್ಯಸ್ಥರಿಗೆ ಗಾರ್ಡ್ ಆಫ್ ಹಾನರ್ ನೀಡಿದರು. 

ಇದರಂತೆ ಭೂ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ಭಾರತೀಯ ಭೂ ಸೇನೆಯು ಸಕಲ ಸೇನಾ ಗೌರವಗಳೊಂದಿಗೆ ಬೀಳ್ಕೊಟ್ಟಿದ್ದು, ಸೇನಾಪಡೆಗಳಿಂತ ರಾವತ್ ಅವರು ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು.

ಯುದ್ಧಸ್ಮಾರಕ್ಕೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿರವ ನರವಾಣೆಯವರು, ಎಲ್ಲಾ ಸಮಯದಲ್ಲಿಯೂ ಸರ್ವಸನ್ನದ್ಧವಾಗಿರುವುದು ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. ಮಾನವ ಹಕ್ಕುಗಳನ್ನು ಗೌರವಿಸುವುದರತ್ತ ವಿಶೇಷ ಗಮನ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಸೇನಾ ಮುಖ್ಯಸ್ಥರಾಗಿ ನನ್ನ ಕರ್ತವ್ಯಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಧೈರ್ಯ ಹಾಗೂ ಶಕ್ತಿ ನೀಡುವಂತೆ ವಾಘ್ ಗುರು ಜೀ ಬಳಿ ಪ್ರಾರ್ಥಿಸುತ್ತೇನೆ. ಮೂರೂ ಸೇನಾಪಡೆಗಳೂ ದೇಶವನ್ನು ರಕ್ಷಣೆ ಮಾಡಲು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp