75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ: ಸಂಸತ್ ಭವನಕ್ಕೆ ಹೊಸ ರೂಪ ನೀಡಲು ಕೇಂದ್ರ ನಿರ್ಧಾರ?

ಸಂಸತ್ ಭವನ ಮತ್ತು ಅದನ್ನೊಳಗೊಂಡ ಸೆಂಟ್ರಲ್ ವಿಸ್ತಾ ಪ್ರದೇಶಕ್ಕೆ ಹೊಸ ರೂಪ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. 

Published: 01st January 2020 09:16 AM  |   Last Updated: 01st January 2020 09:16 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ತ್ರಿಕೋನಾಕಾರದ 3 ಗೋಪುರಗಳ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರ ಚಿಂತನೆ
 

ನವದೆಹಲಿ: ಸಂಸತ್ ಭವನ ಮತ್ತು ಅದನ್ನೊಳಗೊಂಡ ಸೆಂಟ್ರಲ್ ವಿಸ್ತಾ ಪ್ರದೇಶಕ್ಕೆ ಹೊಸ ರೂಪ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. 

75ನೇ ಸ್ವಾತಂತ್ರ್ಯ ದಿನಾಚರಣೆಗೆ ಜನತೆಗೆ ಭರ್ಜರಿ ಉಡುಗೊರೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ತ್ರಿಕೋನಾಕಾರದ ಮೂರು ಗೋಪುರಗಳ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ಲೋಕಸಭೆಯಲ್ಲಿ 1000 ಜನಕ್ಕೆ ಸ್ಥಳಾವಕಾಶ ಸೃಷ್ಟಿಸಲಾಗುತ್ತದೆ. ರಾಜ್ಯಸಭೆ, ಸೆಂಟ್ರಲ್ ಹಾಲ್ ಇರಲಿವೆ. ಇದರ ಜೊತೆಗೆ ಪ್ರಧಾನಮಂತ್ರಿಗಳಿಗೆ ಹೊಸ ನಿವಾಸ, ಭೂಗತ ರಸ್ತೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ಸ್ಮಾರಕ ಕೂಡ 2024ರ ವೇಳೆಗೆ ನಿರ್ಮಾಣವಾಗಲಿವೆ. ಹಳೆ ಸಂಸತ್ ಕಟ್ಟಡ ಹಾಗೆಯೇ ಇರಲಿದೆ ಎಂದು ಹೇಳಲಾಗುತ್ತಿದೆ. 

ಯೋಜನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ನಿವಾಸ ಸ್ಥಳಾಂತರಿಸುವ ಯಾವುದೇ ಚಿಂತನೆಗಳಿಲ್ಲ ಎಂದು ಹೇಳಲಾಗುತ್ತಿದ್ದು, ಇಂಡಿಯಾ ಗೇಟ್ ಗಿಂತಲೂ ಎತ್ತರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp