ಸಿಡಿಎಸ್ ಹುದ್ದೆ, ಮಿಲಿಟರಿ ವ್ಯವಹಾರ ಇಲಾಖೆ ಸೃಷ್ಟಿ 'ಮಹತ್ವದ ಸುಧಾರಣೆ': ಪ್ರಧಾನಿ ಮೋದಿ

ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಹೊಸ ವರ್ಷ ಜನವರಿ 1ರಂದು ಅಧಿಕಾರ ಸ್ವೀಕರಿಸಿಕೊಂಡ ಜನರಲ್ ಬಿಪಿನ್ ರಾವತ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
 

Published: 01st January 2020 12:10 PM  |   Last Updated: 01st January 2020 02:22 PM   |  A+A-


Gen.Bipin Rawat took charge as CDS

ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜನರಲ್ ಬಿಪಿನ್ ರಾವತ್

Posted By : Sumana Upadhyaya
Source : Online Desk

ನವದೆಹಲಿ: ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಹೊಸ ವರ್ಷ ಜನವರಿ 1ರಂದು ಅಧಿಕಾರ ಸ್ವೀಕರಿಸಿಕೊಂಡ ಜನರಲ್ ಬಿಪಿನ್ ರಾವತ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.


ಜನರಲ್ ಬಿಪಿನ್ ರಾವತ್ ಅವರು ಅದ್ವಿತೀಯ ಅಧಿಕಾರಿಯಾಗಿದ್ದು ಅವರ ಅಧಿಕಾರಾವಧಿಯಲ್ಲಿ ಭಾರತೀಯ ಸೇನೆ ಉತ್ತುಂಗಕ್ಕೆ ಏರಿದೆ. ರಕ್ಷಣಾ ಪಡೆಯ ಮೊದಲ ಮುಖ್ಯಸ್ಥರಾಗಿ ಅವರು ಇಂದು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮತ್ತು ಪ್ರಾಣತೆತ್ತ ಸೈನಿಕರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ವೀರ ಯೋಧರು ಹೋರಾಡಿ ಭಾರತಕ್ಕೆ ಜಯವನ್ನು ತಂದುಕೊಟ್ಟ ನಂತರ ನಮ್ಮಲ್ಲಿನ ಮಿಲಿಟರಿ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಹಲವು ಮಾತುಕತೆಗಳು ನಡೆದು ಇಂದಿನ ರಕ್ಷಣಾ ಪಡೆ ಸ್ಥಾಪನೆಯಂತಹ ಇಂದಿನ ಐತಿಹಾಸಿಕ ಬೆಳವಣಿಗೆಗೆ ನಾಂದಿಯಾಗಿದೆ ಎಂದು ಪ್ರಧಾನಿ ಸಂಭ್ರಮಿಸಿದ್ದಾರೆ.


ಕಳೆದ ವರ್ಷ ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣ ಮಾಡುವಾಗ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದೆ. ನಮ್ಮ ಮಿಲಿಟರಿ ಪಡೆಗಳನ್ನು ಆಧುನೀಕರಣಗೊಳಿಸಲು ಈ ರಕ್ಷಣಾ ಸಂಸ್ಥೆ ಹಲವು ಜವಾಬ್ದಾರಿಗಳನ್ನು ಹೊಂದಿರುತ್ತದೆ. ದೇಶದ 130 ಕೋಟಿ ಭಾರತೀಯರ ಆಸೆ, ಆಕಾಂಕ್ಷೆ. ಆಶೋತ್ತರಗಳನ್ನು ಇದು ಪ್ರತಿನಿಧಿಸುತ್ತದೆ ಎಂದಿದ್ದಾರೆ.


ಅಗತ್ಯವಾದ ಮಿಲಿಟರಿ ಪರಿಣತಿಯೊಂದಿಗೆ ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸುವುದು ಮತ್ತು ಸಿಡಿಎಸ್ ಹುದ್ದೆಯನ್ನು ಸಾಂಸ್ಥೀಕರಣಗೊಳಿಸುವುದು ಒಂದು ಮಹತ್ವದ ಮತ್ತು ಸಮಗ್ರ ಸುಧಾರಣೆಯಾಗಿದ್ದು, ಇದು ಆಧುನಿಕ ಭಾರತದಲ್ಲಿ ಬದಲಾವಣೆ ಸಂದರ್ಭದಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ ಎಂದಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp