ವಾಯುಗಡಿ ನೀಲನಕ್ಷೆಗೆ, ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಗಡುವು

ಭಾರತೀಯ ವಾಯುಗಡಿಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಬರುವ ಜೂನ್ ಅಂತ್ಯದೊಳಗೆ ನೀಲನಕ್ಷೆ ತಯಾರಿಸುವಂತೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಅಧಿಕಾರ ಸ್ವೀಕರಿಸಿದ ಬಿಪಿನ್ ರಾವತ್, ಆದೇಶಿಸಿದ್ದಾರೆ.

Published: 02nd January 2020 11:34 PM  |   Last Updated: 02nd January 2020 11:34 PM   |  A+A-


Gen Rawat seeks creation of air defence command

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ನವದೆಹಲಿ: ಭಾರತೀಯ ವಾಯುಗಡಿಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಬರುವ ಜೂನ್ ಅಂತ್ಯದೊಳಗೆ ನೀಲನಕ್ಷೆ ತಯಾರಿಸುವಂತೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಅಧಿಕಾರ ಸ್ವೀಕರಿಸಿದ ಬಿಪಿನ್ ರಾವತ್, ಆದೇಶಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಆದೇಶವಾಗಿದೆ. ಇದಲ್ಲದೆ, ಭಾರತೀಯ ವಾಯುಗಡಿಯೊಳಗಿನ ಕೆಲವು ಪ್ರದೇಶಗಳಲ್ಲಿ ಮೂರೂ ಪಡೆಗಳ ಸಹಭಾಗಿತ್ವದ ಕಾವಲು ಹಾಗೂ ಜಂಟಿ ಹೋರಾಟ ಅನಿವಾರ್ಯವೂ ಆಗಿದೆ ಎಂದು ಪ್ರಸ್ತಾಪಿಸಿದ್ದಾರೆ.

ಇದಲ್ಲದೆ, ಭಾರತೀಯ ವಾಯುಗಡಿಯೊಳಗಿನ ಕೆಲವು ಪ್ರದೇಶಗಳಲ್ಲಿ ಮೂರೂ ಪಡೆಗಳ ಸಹಭಾಗಿತ್ವದ ಕಾವಲು ಹಾಗೂ ಜಂಟಿ ಹೋರಾಟ ಅನಿವಾರ್ಯವಿದೆ. ಅಂಥ ವಲಯಗಳನ್ನು ಗುರುತು ಮಾಡಿ ಅಲ್ಲಿ ಮೂರೂ ಪಡೆಗಳ ಪ್ರತಿನಿಧಿಗಳು ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವಂಥ ವ್ಯವಸ್ಥೆಯನ್ನು ಜಾರಿಗೆ ತರಲು ರಾವತ್‌ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗೆ, ತ್ರಿವಳಿ ಪಡೆಗಳ ಸಹಭಾಗಿತ್ವಕ್ಕೆ ಪೂರಕವಾಗಿ ಯಾವ ಕ್ರಮಗಳನ್ನು ಮೂರೂ ಪಡೆಗಳು ಕೈಗೊಳ್ಳಬಹುದು ಎಂಬುದರ ಪ್ರಸ್ತಾವನೆಗಳನ್ನು ಸಲ್ಲಿಸಲು ಮೂರು ಪಡೆಗಳಿಗೆ ಡಿ. 31ರ ಗಡುವನ್ನು ರಾವತ್‌ ವಿಧಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp