ನಿರ್ಭಯಾ ಅತ್ಯಾಚಾರಿಗಳಿಗೆ ಏಕಕಾಲದಲ್ಲಿ ಗಲ್ಲು, ಐತಿಹಾಸಿಕ ದಾಖಲೆ ಬರೆಯಲಿದೆ ತಿಹಾರ್ ಜೈಲು!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ಏಕಕಾಲಕ್ಕೆ ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಗಿದ್ದು, ಆ ಮೂಲಕ ತಿಹಾರ್ ಜೈಲು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ.

Published: 02nd January 2020 10:25 PM  |   Last Updated: 02nd January 2020 10:26 PM   |  A+A-


Tihar Jail

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ಏಕಕಾಲಕ್ಕೆ ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಗಿದ್ದು, ಆ ಮೂಲಕ ತಿಹಾರ್ ಜೈಲು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ.

ಹೌದು.. ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಅಪರಾಧಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಇತ್ತ ತಿಹಾರ್ ಜೈಲಿನಲ್ಲಿ ಎಲ್ಲ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆಗಳು ಆರಂಭವಾಗಿದೆ. ಮೂಲಗಳ ಪ್ರಕಾರ ನಿರ್ಭಯಾ ಅತ್ಯಾಚಾರ ಪ್ರಕರಣಗಳ ಎಲ್ಲ ನಾಲ್ವರಿಗೂ ಒಟ್ಟಿಗೇ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಾಗುವ ಹೊಸ ಗಲ್ಲು ಕಂಬವನ್ನು ಸಿದ್ಧಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ನಾಲ್ವರು ಆಪಾದಿತರನ್ನೂ ಏಕಕಾಲದಲ್ಲಿ ಗಲ್ಲಿಗೇರಿಸಲಿರುವ ದೇಶದ ಮೊತ್ತ ಮೊದಲ ಕಾರಾಗೃಹ ಎಂಬ ಕೀರ್ತಿಗೆ ತಿಹಾರ್ ಜೈಲು ಪಾತ್ರವಾಗಲಿದೆ. ಇದುವರೆಗೆ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲು ಒಂದೇ ಗಲ್ಲು ಕಂಬವಿತ್ತು. ಆಪಾದಿತರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ನಡೆಯುತ್ತಿದ್ದು ಜೈಲಿನ ಆವರಣದೊಳಗೆ ಜೆಸಿಬಿ ಯಂತ್ರವನ್ನು ತರಲಾಗಿದ್ದು ನೆಲದಡಿ ಸುರಂಗ ತೋಡುವ ಕಾರ್ಯ ನಡೆಯುತ್ತಿದೆ. ನೇಣು ಹಾಕಿದ ಬಳಿಕ ಮೃತದೇಹಗಳನ್ನು ಅಲ್ಲಿಂದ ವರ್ಗಾಯಿಸಲು ಸುರಂಗವನ್ನು ಬಳಸಲಾಗುತ್ತದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp