ತಿರುಮಲದಲ್ಲಿ ಜನವರಿ  6 ಹಾಗೂ 7 ರಂದು  ಭಕ್ತರಿಗೆ ವೈಕುಂಠ ದ್ವಾರ ದರ್ಶನ

ತಿರುಪತಿ-ತಿರುಮಲದ ವೆಂಕಟರಮಣಸ್ವಾಮಿಯ  ದೇಗುಲದಲ್ಲಿ ಜನವರಿ  6 ಮತ್ತು  7ರಂದು ಎರಡು ದಿನಗಳ ಕಾಲ ವೈಕುಂಠ ಏಕಾದಶಿ, ದ್ವಾದಶಿಯ  ಅಂಗವಾಗಿ  ಭಕ್ತಾಧಿಗಳಿಗೆ  ವೈಕುಂಠ ದ್ವಾರ  ದರ್ಶನ ಕಲ್ಪಿಸಲಾಗುವುದು  ಎಂದು   ಟಿಟಿಡಿ  ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುಮಲ: ತಿರುಪತಿ-ತಿರುಮಲದ ವೆಂಕಟರಮಣಸ್ವಾಮಿಯ  ದೇಗುಲದಲ್ಲಿ ಜನವರಿ  6 ಮತ್ತು  7ರಂದು ಎರಡು ದಿನಗಳ ಕಾಲ ವೈಕುಂಠ ಏಕಾದಶಿ, ದ್ವಾದಶಿಯ  ಅಂಗವಾಗಿ  ಭಕ್ತಾಧಿಗಳಿಗೆ  ವೈಕುಂಠ ದ್ವಾರ  ದರ್ಶನ  ಕಲ್ಪಿಸಲಾಗುವುದು  ಎಂದು   ಟಿಟಿಡಿ  ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. 

ಏಕಾದಶಿ  ಅಂಗವಾಗಿ ಒಂದು ಕೋಟಿ  70 ಲಕ್ಷ ರೂ  ವೆಚ್ಚದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ.  ಸುಮಾರು  ಒಂದು ಲಕ್ಷದ   80 ಸಾವಿರ  ಭಕ್ತರಿಗೆ  ಮಾತ್ರ ವೈಕುಂಠ ದ್ವಾರ ಮೂಲಕ  ದರ್ಶನ  ಕಲ್ಪಿಸುವ  ಅವಕಾಶವಿದೆ.  ಇದನ್ನು ಗಮನದಲ್ಲಿಟ್ಟುಕೊಂಡು  ಭಕ್ತಾಧಿಗಳು   ದೇವಾಲಯ  ಮಂಡಳಿಯೊಂದಿಗೆ  ಸಹಕರಿಸುವಂತೆ ಮನವಿ ಮಾಡಿದ್ದಾರೆ. ನಾರಾಯಣಗಿರಿ ಉದ್ಯಾನವನದಲ್ಲಿ ೨೬ ಕೋಟಿ ರೂ ವೆಚ್ಚದಲ್ಲಿ   ನಿರ್ಮಿಸಿರುವ  ಹೊಸ ಸರತಿ ಸಾಲಿನ  ವ್ಯವಸ್ಥೆಯನ್ನು  ಇದೇ  ೫ ರಿಂದ ಭಕ್ತರ ಸೇವೆಗೆ  ಮುಕ್ತಗೊಳಿಸಲಾಗುತ್ತಿದೆ ಎಂದು  ಸಿಂಘಾಲ್ ಪ್ರಕಟಿಸಿದರು.
 
ಈ  ತಿಂಗಳ  21,28 ರಂದು  ದಿವ್ಯಾಂಗರಿಗೆ,  ಮಾರ್ಚ್ 22 ಮತ್ತು 29 ರಂದು ಹಸುಗೂಸು  ಹೊಂದಿರುವ ತಂದೆ ತಾಯಿಯರಿಗೆ ದೇವರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.

ವಿಶಾಖಪಟ್ಟಣಂನಲ್ಲಿ 22 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ  ತಿಮ್ಮಪ್ಪನ  ದೇವಾಲಯವನ್ನು ಏಪ್ರಿಲ್‌ನಲ್ಲಿ  ಪ್ರಾರಂಭಗೊಳಿಸಲಾಗುವುದು. ಫೆಬ್ರವರಿ 1 ರಂದು ರಥಸಪ್ತಮಿ  ಕಾರ್ಯಕ್ರಮವನ್ನು  ಅದ್ದೂರಿಯಾಗಿ  ನಡೆಸಲಾಗುವುದು.  ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ವರ್ಷದ  ಡೈರಿಗಳನ್ನು ನಿಗದಿತ  ಸಮಯದಲ್ಲಿ  ಭಕ್ತರಿಗೆ ಒದಗಿಸಲು ಸಾಧ್ಯವಾಗಿಲ್ಲ ಅನಿಲ್ ಕುಮಾರ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com