ಪಾಕ್ ಉಗ್ರರ ಎದೆನಡುಗಿಸಲು ಸರ್ಜಿಕಲ್ ಸ್ಟ್ರೈಕ್‌ ವಿಫಲ: ಕೇಂದ್ರಕ್ಕೆ ಶಿವಸೇನೆ ಚಾಟಿ

2016 ರ ಸರ್ಜಿಕಲ್ ಸ್ಟ್ರೈಕ್‌ನ ಪರಿಣಾಮವನ್ನೇ ಪ್ರಶ್ನಿಸುವ ಮೂಲಕ ಶಿವಸೇನೆ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದೆ. ಸರ್ಜಿಕಲ್ ಸ್ಟ್ರೈಕ್‌ ನಡೆದ ಬಳಿಕವೂ ಕಾಶ್ಮೀರದಲ್ಲಿ  ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೈನಿಕರು ಸಾವನ್ನಪ್ಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್‌ ಪಾಕಿಸ್ತಾನದ ಭಯೋತ್ಪಾದಕರ ಧೈರ್ಯಗುಂದಿಸಿದ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: 2016 ರ ಸರ್ಜಿಕಲ್ ಸ್ಟ್ರೈಕ್‌ನ ಪರಿಣಾಮವನ್ನೇ ಪ್ರಶ್ನಿಸುವ ಮೂಲಕ ಶಿವಸೇನೆ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದೆ. ಸರ್ಜಿಕಲ್ ಸ್ಟ್ರೈಕ್‌ ನಡೆದ ಬಳಿಕವೂ ಕಾಶ್ಮೀರದಲ್ಲಿ  ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೈನಿಕರು ಸಾವನ್ನಪ್ಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್‌ ಪಾಕಿಸ್ತಾನದ ಭಯೋತ್ಪಾದಕರ ಧೈರ್ಯಗುಂದಿಸಿದೆ ಎನ್ನುವುದು ಕೇವಲ  "ಭ್ರಮೆ" ಯಾಗಿದೆ ಎಂದು ಶಿವಸೇನೆ ತಿರುಗೇಟು ನೀಡಿದೆ.

ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನವನ್ನು ಹೇಗೆ ಹಣಿಯಲಾಗಿದೆ ಎನ್ನುವುದನ್ನು ಬಣ್ಣಿಸಿ ಮೋದಿ ಸರ್ಕಾರ ಹೆಮ್ಮೆಪಡುತ್ತಿದೆ ಎಂದು ಆರೋಪಿಸಿದ ಶಿವಸೇನೆ ಆದರೆ ಇದಾವುದು ನಿಜವಾಗಿ ಸಂಭವಿಸಿದಂತೆ ಕಾಣುತ್ತಿಲ್ಲ ಮತ್ತು ಗಲಭೆ ಪೀಡಿತ ಅಸುರಕ್ಷಿತ ಗಡಿ ಪ್ರದೇಶಗಳು  ದೇಶದ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ ಎಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ನಡೆದ ಉಗ್ರರ ದಾಳಿಯಲ್ಲಿ ಮಹಾರಾಷ್ಟ್ರದ ಸೈನಿಕ ನಾಯಕ್ ಸಂದೀಪ್ ರಘುನಾಥ್ ಸಾವಂತ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಶಿವಸೇನೆ ಈ ಹೇಳಿಕೆ ಬಂದಿದೆ.

"ಹೊಸ ವರ್ಷವು ಕಾಶ್ಮೀರದಲ್ಲಿ ಸಕಾರಾತ್ಮವಾಗಿ ಪ್ರಾರಂಭವಾಗಿಲ್ಲ. ಸತಾರಾದ ನಮ್ಮ  ಸೈನಿಕ ಸಂದೀಪ್ ಸಾವಂತ್, ಇತರ ಇಬ್ಬರು ಸೈನಿಕರೊಂದಿಗೆ ಕಾಶ್ಮೀರದಲ್ಲಿ ಹುತಾತ್ಮರಾದರು. ಕಳೆದ ಒಂದು ತಿಂಗಳಲ್ಲಿ, ಮಹಾರಾಷ್ಟ್ರದ ಏಳರಿಂದ ಎಂಟು ಯೋಧರು ಉಗ್ರ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ. ಆದರೆ ರಾಜ್ಯದ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರ್ಕಾರವು ಇದಕ್ಕೆ ಕಾರಣವಲ್ಲ " ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಬರಹದಲ್ಲಿ ಹೇಳಿದೆ.  ಸರ್ಜಿಕಲ್ ಸ್ಟ್ರೈಕ್ ಮತ್ತು 370ನೇ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದೆಯೆ ಎಂದು ಸೇನಾ ಪ್ರಶ್ನಿಸಿದೆ. ಆದಾಗ್ಯೂ, 370 ನೇ ವಿಧಿಯನ್ನು ರದ್ದುಪಡಿಸುವುದು ಉತ್ತಮ ನಡೆ ಎಂದು ಸಮರ್ಥಿಸಿಕೊಂಡಿದೆ.

ಸೆಪ್ಟೆಂಬರ್ 2016ರ ಪ್ರಾರಂಭದಲ್ಲಿ ಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಸೆಪ್ಟೆಂಬರ್ 29, 2016 ರಂದು ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ರ ಸರ್ಜಿಕಲ್ ಸ್ಟ್ರೈಕ್‌ ನಡೆಸಿತ್ತು.

"ಕಾಶ್ಮೀರದಲ್ಲಿ ಪಾಕಿಸ್ತಾನಿಗಳು ಮಾತ್ರ ಕೊಲ್ಲಲ್ಪಡುತ್ತಿದ್ದಾರೆ ಎಂಬ ಸುದ್ದಿ ಪ್ರಸಾರವಾಗುವುದರಿಂದ ವಾಸ್ತವವು ಬದಲಾಗುವುದಿಲ್ಲ, ಏಕೆಂದರೆ ಸಾವಂತ್ ಅವರಂತೆ ಭಾರತೀಯ ಸೈನಿಕರ ಮೃತದೇಹಗಳು ತ್ರಿವರ್ಣ ಧ್ವಜ ಹೊತ್ತು ಆಯಾ ಗ್ರಾಮಗಳಿಗೆ ತಲುಪುತ್ತಿವೆ" ಎಂದು ಕೇಂದ್ರವನ್ನು ಹೆಸರಿಸದೆ ಶಿವಸೇನೆ ಆರೋಪಿಸಿದೆ.

"ಕಾಶ್ಮೀರ ಗಡಿಯಲ್ಲಿ ರಕ್ತಪಾತವಾಗುತ್ತಿದೆ, ಹುತಾತ್ಮ ಯೋಧರ ಕುಟುಂಬದವರಲ್ಲಿ ಆಕ್ರೋಶ ಹೆಚ್ಚುತ್ತಿದೆ. ಸರ್ಜಿಕಲ್ ಸ್ಟ್ರೈಕ್‌  ಪಾಕಿಸ್ತಾನದ ಭಯೋತ್ಪಾದಕರನ್ನು ನಿರಾಶೆಗೊಳಿಸಿದೆ ಎಂಬ ಗ್ರಹಿಕೆ ಕೇವಲ ಭ್ರಮೆಯಾಗಿದೆ,  ವಾಸ್ತವವಾಗಿ, (ಭಯೋತ್ಪಾದನೆ) ದಾಳಿಗಳು ಹೆಚ್ಚಾಗಿದೆ" ಎಂದು ಶಿವಸೇನೆ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com