ತಿಮ್ಮಪ್ಪನ ಭಕ್ತರಿಗೆ ಬಂಪರ್ ಗಿಫ್ಟ್: ಉಚಿತ ಲಡ್ಡು, ಏಕಾದಶಿ ನಂತರ ಜಾರಿ ಸಾಧ್ಯತೆ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಭರ್ಜರಿ ಗಿಫ್ಟ್ ನೀಡಿದ್ದು, ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಪ್ರತೀ ಭಕ್ತರಿಗೆ ಉಚಿತ ಲಡ್ಡು ನೀಡಲು ನಿರ್ಧರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುಪತಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಭರ್ಜರಿ ಗಿಫ್ಟ್ ನೀಡಿದ್ದು, ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಪ್ರತೀ ಭಕ್ತರಿಗೆ ಉಚಿತ ಲಡ್ಡು ನೀಡಲು ನಿರ್ಧರಿಸಲಾಗಿದೆ.

ಹೌದು..ತಿರುಮಲ ಯಾತ್ರಿಕರಿಗೆ ಹೊಸ ವರ್ಷದ ಗಿಫ್ಟ್‌ ಕೊಡಲು ಟಿಟಿಡಿ ತೀರ್ಮಾನಿಸಿದ್ದು, ದೇವರ ದರ್ಶನಕ್ಕೆ ಬರುವ ಪ್ರತಿ ಭಕ್ತರಿಗೂ ಇನ್ನು ಮುಂದೆ ಉಚಿತ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ. ತಿರುಮಲದಲ್ಲಿರುವ ತಿಮ್ಮಪ್ಪನ ದೇಗುಲದಲ್ಲಿ ನಿತ್ಯ ಸುಮಾರು 3 ಲಕ್ಷ ಲಡ್ಡುಗಳ ವಿತರಣೆಯಾಗುತ್ತಿದ್ದು, ಈ ಪೈಕಿ 80 ಸಾವಿರದಿಂದ ಒಂದು ಲಕ್ಷದವರೆಗೂ ಲಡ್ಡುಗಳನ್ನು ಉಚಿತವಾಗಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. ಅಂದರೆ ಪ್ರತೀ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

ಇಷ್ಟು ದಿನ ಕಾಲ್ನಡಿಗೆಯಲ್ಲಿ ದೇಗುಲಕ್ಕೆ ಬಂದು ಧರ್ಮದರ್ಶನ ಮಾಡುವ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ದೇಗುಲಕ್ಕೆ ಬರುವ ಪ್ರತೀ ಭಕ್ತರಿಗೂ ಒಂದೊಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಇದೇ ಜನವರಿ 6 ವೈಕುಂಠ ಏಕಾದಶಿ ಬಳಿಕ ಈ ನಿಯಮ ಜಾರಿಗೆ ತರಲು ಟಿಟಿಡಿ ನಿರ್ಧರಿಸಿದೆ ಎನ್ನಲಾಗಿದೆ.

ಹೆಚ್ಚುವರಿ ಲಡ್ಡುಗಳಿಗೆ ಪ್ರತ್ಯೇಕ ಕೌಂಟರ್
ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಟಿಟಿಡಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದೆ. ಹೆಚ್ಚುವರಿ ಲಡ್ಡು ಪ್ರಸಾದಕ್ಕಾಗಿ ಪ್ರತಿ ಲಡ್ಡುವಿಗೆ 50 ರೂ. ನಿಗದಿಪಡಿಸುವ ಉದ್ದೇಶವಿದೆ. ಈ ಮೊದಲು ಹೆಚ್ಚುವರಿ ಲಡ್ಡು ಪ್ರಸಾದ ಪಡೆಯಲು ಟಿಟಿಡಿ ಅಧಿಕಾರಿಗಳ ಅನುಮತಿ ಪತ್ರ ಪಡೆಯಬೇಕಿತ್ತು. ಹೊಸ ಯೋಜನೆಯಡಿ ಅನುಮತಿ ಪತ್ರದ ಅವಶ್ಯಕತೆ ಇರುವುದಿಲ್ಲ. 

ಕಾಳಸಂತೆಯಲ್ಲಿ ಲಡ್ಡು, ಅಕ್ರಮ ತಡೆಗೆ ನೂತನ ಕ್ರಮ
ಇನ್ನು ವಿಶ್ವವಿಖ್ಯಾತ ತಿರುಮಲ ಲಡ್ಡುಗಳು ಕಾಳಸಂತೆಯಲ್ಲಿ ಮಾರಾಟಲಾಗುತ್ತಿದೆ. ಕಳೆದ ನವೆಂಬರ್‌ನಲ್ಲಿ ಕಾಳಸಂತೆ ದರದಲ್ಲಿಲಡ್ಡು ಮಾರಾಟವಾಗುತ್ತಿದ್ದುದನ್ನು ಟಿಟಿಡಿಯ ವಿಚಕ್ಷಣಾ ದಳ ಪತ್ತೆ ಹಚ್ಚಿತ್ತು. ನವರಾತ್ರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ 14 ಲಕ್ಷ ರೂ. ಮೌಲ್ಯದ ಲಡ್ಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com