ಬ್ರೈನ್ ಹ್ಯಾಮರೇಜ್ ನಿಂದ ಯೋಧ ಸಾವು, ನೊಂದ ಪತ್ನಿ ಆತ್ಮಹತ್ಯೆಗೆ ಶರಣು

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಯೋಧ ಮೆದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್)ದಿಂದ ಮೃತಪಟ್ಟಿದ್ದು, ಪತಿಯ ಸಾವಿನ ಆಘಾತದಿಂದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಂಚಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಯೋಧ ಮೆದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್)ದಿಂದ ಮೃತಪಟ್ಟಿದ್ದು, ಪತಿಯ ಸಾವಿನ ಆಘಾತದಿಂದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಂಚಿಯಲ್ಲಿ ನಡೆದಿದೆ.

ಸೇನಾ ಅಧಿಕಾರಿಗಳ ಪ್ರಕಾರ, ಯೋಧ ಬಜರಂಗಿ ಭಗತ್ ಅವರು ಡಿಸೆಂಬರ್ 30ರಂದು ಬೆಡ್ ಮೇಲಿಂದ ಬಿದ್ದ ಪರಿಣಾನ ಮೆದುಳು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಯೋಧನ ಮೃತದೇಹ ಜನವರಿ 1ರಂದು ಸ್ವಗ್ರಾಮ ರಾಂಚಿಯ ಬಹ್ರೆರಾಗೆ ತಲುಪಿದೆ. ಪತಿಯ ಮೃತ ದೇಹವನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ಎಂದ ಭಗತ್ ಪತ್ನಿ ಮನಿತಾ ಒರಾನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದಾಗ್ಯೂ, ಮನಿತಾ ಅವರ ಕುಟುಂಬ ಸದಸ್ಯರು, ಮಕ್ಕಳಾಗದ ಕಾರಣ ಅವಳು ತುಂಬಾ ನೊಂದಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

2012ರ ಏಪ್ರಿಲ್ ನಲ್ಲಿ ಭಾರತೀಯ ಸೇನೆಗೆ ಸೇರಿದ್ದ ಭಗತ್ ಅವರು, ನಾಗ್ಪುರದ ರೆಜಿಮೆಂಟಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಅವರನ್ನು ಜಮ್ಮು ಮತ್ತು ಕಾಶ್ನೀರಕ್ಕೆ ನಿಯೋಜಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಮನಿತಾ ಅವರನ್ನು ಮದುಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com