ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರ ಆಯ್ಕೆ, ಬಂಗಾಳ, ಕೇರಳ, ಮಹಾಗೆ ಗೇಟ್ ಪಾಸ್!

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಪೆರೇಡ್ನಲ್ಲಿ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ.
ಕರ್ನಾಟಕ ಸ್ತಬ್ಧಚಿತ್ರ
ಕರ್ನಾಟಕ ಸ್ತಬ್ಧಚಿತ್ರ

ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಪೆರೇಡ್ನಲ್ಲಿ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ. 
 
ಕೇರಳ, ಪಶ್ಚಿಮಬಂಗಾಳ ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ. ಈ ಬಾರಿ ಪಥಸಂಚಲನದಲ್ಲಿ ಕರ್ನಾಟಕದಿಂದ ಜಗಜ್ಯೋತಿ ಬಸವೇಶ್ವರ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. 

ಸಂವಿಧಾನಕ್ಕೆ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 12ನೇ ಶತಮಾನದ ಅನುಭವ ಮಂಟಪದ ಮಾದರಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಪಾಯವಾಗಿದೆ ಎಂಬ ಕಾರಣಕ್ಕೆ ಇದನ್ನೇ ಆಯ್ಕೆ ಮಾಡಲಾಗಿದೆ ಸತತ 12ನೇ ಬಾರಿಗೆ ಕರ್ನಾಟಕ ಸ್ತಬ್ಧಚಿತ್ರಗಳ ಪೆರೇಡ್ನಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ದೊರಕಿದೆ.

ಕೇರಳದ ಸ್ತಬ್ಧಚಿತ್ರ ಸತತ ಎರಡನೇ ಬಾರಿಗೆ ತಿರಸ್ಕಾರಗೊಂಡಿದೆ. ಸ್ತಬ್ಧಚಿತ್ರಗಳನ್ನು. ಥೆಯ್ಯಮ್ ಹಾಗೂ ಕಲಾಮಂಡಲ ಸಾಂಸ್ಕೃತಿಕ ಕಲೆ ಆಧರಿಸಿದ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ಕೇರಳ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು.

ಕೇಂದ್ರ ಈ ಕ್ರಮವನ್ನು ಟೀಕಿಸಿರುವ ಕೇರಳದ ಕಾನೂನು ಸಚಿವ ಎ.ಕೆ.ಬಾಲನ್ ಅವರು ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎಂದೂ ಆಕ್ರೋಶ ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com