ನಕಲಿ ವಿಡಿಯೋ ಟ್ವೀಟ್ ಮಾಡಿ ತಾವೇ ಮೂರ್ಖರಾದ ಪಾಕ್ ಪ್ರಧಾನಿ, ಸೇನೆಯ ಕೈಗೊಂಬೆ -ಗಂಭೀರ್

ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಲು ನೆರೆಯ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಗೌತಮ್ ಗಂಭೀರ್, ಇಮ್ರಾನ್ ಖಾನ್
ಗೌತಮ್ ಗಂಭೀರ್, ಇಮ್ರಾನ್ ಖಾನ್

ನವದೆಹಲಿ:  ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಲು ನೆರೆಯ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ಭಾರತೀಯ ಪೊಲೀಸರ ರಕ್ತಪಾತ ಹರಿಸುವಂತೆ  ಬಿಂಬಿಸುವಂತಿರುವ ವಿಡಿಯೋ  ಶೇರ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸೈನ್ಯದ ಕೈ ಗೊಂಬೆ ಎಂದು ಗೌತಮ್ ಗಂಭೀರ್ ಕರೆದಿದ್ದಾರೆ.

ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದ ವಿಡಿಯೋ ಏಳು ವರ್ಷ ಹಳೆಯದಾಗಿದ್ದು, ಅದು ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿರುವ ಘಟನೆಯ ವಿಡಿಯೋ ಆಗಿದೆ. ಅದು ಭಾರತದಲ್ಲ,  ನಂತರ ತಮ್ಮ ತಪ್ಪಿನ ಅರಿವಾಗಿ ಆ ಟ್ವೀಟ್ ನ್ನು ಡಿಲಿಟೀ ಮಾಡಿದ್ದರು.

ಗುರುದ್ವಾರದ ಮೇಲೆ ಕಲ್ಲು ತೂರಾಟದ ವಿಡಿಯೋವನ್ನು ಟ್ವೀಟ್ ಮಾಡಿರುವ  ಗೌತಮ್ ಗಂಭೀರ್, ಯುವತಿಯನ್ನು ಬಲವಂತದಿಂದ ಮತಾಂತರಗೊಳಿಸಲು ಅಮಾಯಕ ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಜೀವ ಬೆದರಿಕೆ ಹಾಕಲಾಗುತ್ತಿದೆ. ಇದು ಪಾಕಿಸ್ತಾನ .ಆದ್ದರಿಂದ ಭಾರತ ಸಿಎಎ ಬೆಂಬಲಿಸುತ್ತಿದೆ. ಸೇನೆಯ ಕೈಗೊಂಬೆಯಾಗಿರುವ ಪ್ರಧಾನಿ ಇಮ್ರಾನ್ ಖಾನ್, ನಕಲಿ ವಿಡಿಯೋ ಶೇರ್ ಮಾಡಿ ತಾವೇ ಮೂರ್ಖರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com