ಮಹಾ ಸಚಿವರಿಗೆ ಖಾತೆ ಹಂಚಿದ ಉದ್ಧವ್ ಠಾಕ್ರೆ, ಯಾರಿಗೆ ಏನು? ಇಲ್ಲಿದೆ ವಿವರ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಪ್ರಸ್ತಾಪಿಸಿದಂತೆ ಖಾತೆ ಹಂಚಿಕೆಗೆ ಮಹಾ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅನುಮೋದನೆ ನೀಡಿದ್ದಾರೆ ಎಂದು ರಾಜಭವನ ವಕ್ತಾರರು ತಿಳಿಸಿದ್ದಾರೆ.ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಿಸಿದ ಆರು ದಿನಗಳ ನಂತರ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಪ್ರಸ್ತಾಪಿಸಿದಂತೆ ಖಾತೆ ಹಂಚಿಕೆಗೆ ಮಹಾ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅನುಮೋದನೆ ನೀಡಿದ್ದಾರೆ ಎಂದು ರಾಜಭವನ ವಕ್ತಾರರು ತಿಳಿಸಿದ್ದಾರೆ.ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಿಸಿದ ಆರು ದಿನಗಳ ನಂತರ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಖಾತೆ ನೀಡಲಾಗಿದ್ದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅನಿಲ್ ದೇಹ್ಮುಖ್  ಅವರಿಗೆ ಗೃಹ ಖಾತೆ ನೀಡಲಾಗಿದೆ.

ಶಿವಸೇನೆಯ ಆದಿತ್ಯ ಠಾಕ್ರೆ.ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಪ್ರೋಟೋಕಾಲ್ ನೀಡಲಾಗಿದೆ. ಇನ್ನೊಬ್ಬ ಸಚಿವ ಏಕನಾಥ ಶಿಂಧೆ ಅವರಿಗೆ ನಗರಾಭಿವೃದ್ಧಿ ಖಾತೆ,  ಪಕ್ಷದ ಸಹೋದ್ಯೋಗಿ ಸುಭಾಷ್ ದೇಸಾಯಿ ಕೈಗಾರಿಕಾ ಸಚಿವಾಲಯವನ್ನು ನಿರ್ವಹಿಸಲಿದ್ದಾರೆ. ಕಾಂಗ್ರೆಸ್ ನ ಬಾಲಾಸಾಹೇಬ್ ಥೋರತ್ ಅವರಿಗೆ ಕಂದಾಯ ಸಚಿವ ಸ್ಥಾನ ಸಿಕ್ಕಿದೆ. ನಿತಿನ್ ರೌತ್ ಇಂಧನ ಖಾತೆಯನ್ನು ನಿರ್ವಹಿಸಲಿದ್ದರೆ, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಲೋಕೋಪಯೋಗಿ ಇಲಾಖೆಯನ್ನು ನೀಡಲಾಗಿದೆ

ಸರ್ಕಾರದಲ್ಲಿ ಮಹತ್ವದ ಖಾತೆಗಳು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಾಲಾಗಿದೆ. 

ಸಚಿವರಿಗೆ ಹಂಚಿಕೆ ಮಾಡಬೇಕಾದಖಾತೆಗಳ ಪಟ್ಟಿಯನ್ನು ಶನಿವಾರ ಸಂಜೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಖಾತೆ ಹಂಚಿಕೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ರಾಜಭವನ ವಕ್ತಾರರು ಭಾನುವಾರ ಸ್ಪಷ್ತಪಡಿಸಿದ್ದಾರೆ.

ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರೂ ಖಾತೆ ಹಂಚಿಕೆ ಇನ್ನೂ ನಡೆದಿರಲಿಲ್ಲ. ಇದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com