ಮಾಧ್ಯಮ ಸಂಸ್ಥೆಗಳಿಗೆ ಮೊದಲ ಅಂತಾರಾಷ್ಟ್ರೀಯ ಯೋಗ ದಿವಸ್ ಪ್ರಶಸ್ತಿ

ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ 30 ಮಾಧ್ಯಮಗಳಿಗೆ ಮೊದಲ ‘ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮನ್’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಕಾಶ್ ಜಾವ್ಡೇಕರ್
ಪ್ರಕಾಶ್ ಜಾವ್ಡೇಕರ್

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ 30 ಮಾಧ್ಯಮಗಳಿಗೆ ಮೊದಲ ‘ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮನ್’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಭಾರತ ಮತ್ತು ವಿದೇಶಗಳಲ್ಲಿ ಯೋಗ ಪ್ರಚುರಪಡಿಸುವಲ್ಲಿ ಮಾಧ್ಯಮಗಳ ಸಕಾರಾತ್ಮಕ ಪಾತ್ರ ಮತ್ತು ಜವಾಬ್ದಾರಿಯನ್ನು ಮನಗಂಡ ಸಚಿವಾಲಯ, ಕಳೆದ ವರ್ಷ ಜೂನ್‌ನಲ್ಲಿ ಯೋಗದ ಸಂದೇಶವನ್ನು ಹರಡುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲು ನಿರ್ಧರಿಸಿತ್ತು.

ಪತ್ರಿಕೆಗಳಲ್ಲಿ ಯೋಗದ ಅತ್ಯುತ್ತಮ ಮಾಹಿತಿ ವಿಭಾಗದಡಿ ಹನ್ನೊಂದು ಪ್ರಶಸ್ತಿಗಳನ್ನು ನೀಡಲಾಗುವುದು, ದೂರದರ್ಶನದಲ್ಲಿ ಯೋಗದ ಅತ್ಯುತ್ತಮ ಮಾಹಿತಿ ಪ್ರಸಾರ ವಿಭಾಗದಡಿ 8 ಪ್ರಶಸ್ತಿಗಳನ್ನೂ, ಶ್ರವ್ಯ ಮಾಧ್ಯಮದಲ್ಲಿ ಯೋಗದ ಬಗ್ಗೆ ಹೆಚ್ಚು ಮಾಹಿತಿ ಪಸರಿಸಿದ ಸಂಸ್ಥೆಗಳಿಗೆ 11 ಪ್ರಶಸ್ತಿಗಳನ್ನು ನೀಡಲಾಗುವುದು.

 ವಿಶೇಷ ಪದಕ, ಫಲಕ, ಟ್ರೋಫಿ ಮತ್ತು ಭಿನ್ನವತ್ತಳೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com