2 ವರ್ಷ ಜೆಎನ್ ಯು ಬಂದ್ ಮಾಡಿ: ಹಿಂಸಾಚಾರ ಕುರಿತಂತೆ ಸುಬ್ರಮಣಿಯನ್ ಸ್ವಾಮಿ ಕಿಡಿ

ಎರಡು ವರ್ಷಗಳ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ವನ್ನು ಬಂದ್ ಮಾಡುವಂತೆ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಎರಡು ವರ್ಷಗಳ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ವನ್ನು ಬಂದ್ ಮಾಡುವಂತೆ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ, ವಿಪಕ್ಷಗಳ ವಿರುದ್ಧ ತೀವ್ರ ಕಿಡಿಕಾರಿದರು. ಜೆಎನ್ ಯು ಹಿಂಸಾಚಾರಕ್ಕೆ ವಿರೋಧ ಪಕ್ಷಗಳೇ ಕಾರಣ ಎಂದು ಹೇಳಿದ ಸ್ವಾಮಿ, ಜೆಎನ್ ಯು ವಿದ್ಯಾರ್ಥಿಗಳ ಹೋರಾಟವನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಹಿಸಾಕ್ತಿಗಾಗಿ ಹೈಜಾಕ್ ಮಾಡಲು ಯತ್ನಿಸಿದ ಪರಿಣಾಮವೇ ಇಂದು ಅಲ್ಲಿ ಹಿಂಸಾಚಾರ ನಡೆದಿದೆ. ವಿಪಕ್ಷಗಳಿಗೆ ಸರ್ಕಾರವನ್ನು ಟೀಕಿಸಲು ಒಂದಿಲ್ಲೊಂದು ಕಾರಣ ಬೇಕಿದೆ. ಯಾವುದೂ ಸಿಗದೇ ಇದ್ದಾಗ ತಾವೇ ಕಾರಣವನ್ನು ಸೃಷ್ಟಿಸಲು ಮುಂದಾಗಿವೆ ಎಂದು ಕಿಡಿಕಾರಿದ್ದಾರೆ.

ಅಂತೆಯೇ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ವೇದಿಕೆಯಾಗಬೇಕಿದ್ದ ಕ್ಯಾಂಪಸ್ ಇಂದು ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿರುವುದು ನಿಜಕ್ಕೂ ಆಘಾತಕಾರಿ. ಹೀಗಾಗಿ ಜೆಎನ್ ಯು ಪ್ರಾಧ್ಯಪಕರು 3 ತಿಂಗಳ ಕಾಲ ಕ್ಯಾಂಪಸ್ ಗೆ ಆಗಮಿಸದಂತೆ ನಿಷೇಧ ಹೇರಿ, ವಿವಿಯನ್ನು 2 ವರ್ಷಗಳ ಕಾಲ ಸ್ಥಗಿತಗೊಳಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೇರೆ ವಿವಿಗಳಿಗೆ ವರ್ಗಾವಣೆ ಮಾಡಬೇಕು ಎಂದು ಸ್ವಾಮಿ ಹೇಳಿದ್ದಾರೆ.

ಯೋಗೇಂದ್ರ ಯಾದವ್ ರನ್ನು ನಂಬುವ ಹಾಗಿಲ್ಲ, ಏನು ಬೇಕಾದರೂ ಹೇಳುತ್ತಾರೆ
ಇದೇ ವೇಳೆ ಆಪ್ ನಾಯಕ ಯೋಗೇಂದ್ರ ಯಾದವ್ ಕುರಿತು ಮಾತನಾಡಿದ ಸ್ವಾಮಿ, ಯೋಗೇಂದ್ರ ಯಾದವ್ ಅವರನ್ನು ಯಾರೂ ನಂಬುವಂತೆ ಇಲ್ಲ, ತಮಗೆ ಇಷ್ಟ ಬಂದ ರೀತಿ ಅವರು ಹೇಳುತ್ತಾರೆ. ಸುಳ್ಳು ಹೇಳುವುದು ಅವರಿಗೆ ತುಂಬಾ ಚೆನ್ನಾಗಿ ಕರಗತವಾಗಿದೆ. ವಿಪಕ್ಷ ನಾಯಕರ ಬಳಿ ಎಷ್ಟು ಪಾಸ್ ಪೋರ್ಟ್ ಗಳಿವೆ, ಎಷ್ಟು ಪದವಿಗಳಿವೆ ಎಂಬುದನ್ನು ಮೊದಲು ಅವರು ಸಾಬೀತು ಮಾಡಲಿ.  ಬಳಿಕ ಟೀಕಿಸಲಿ ಎಂದು ಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com