ಜೆಎನ್‌ಯು ಹಿಂಸಾಚಾರವನ್ನು 26/11ರ ಮುಂಬೈ ಉಗ್ರ ದಾಳಿಗೆ ಹೋಲಿಸಿದ ಸಿಎಂ ಉದ್ಧವ್ ಠಾಕ್ರೆ!

ಜಾಮಿಯಾ ವಿವಿ ಕ್ಯಾಂಪ್ ನಲ್ಲಿನ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಅನ್ನು ಬ್ರಿಟಿಷ್ ಆಡಳಿತದ ಜಲಿಯನ್ ವಾಲಾಬಾಗ್ ಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಜೆಎನ್ ಯು ಕಾಲೇಜಿನಲ್ಲಿನ ಹಿಂಸಾಚಾರವನ್ನು 26/11ರ ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಜಾಮಿಯಾ ವಿವಿ ಕ್ಯಾಂಪ್ ನಲ್ಲಿನ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಅನ್ನು ಬ್ರಿಟಿಷ್ ಆಡಳಿತದ ಜಲಿಯನ್ ವಾಲಾಬಾಗ್ ಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಜೆಎನ್ ಯು ಕಾಲೇಜಿನಲ್ಲಿನ ಹಿಂಸಾಚಾರವನ್ನು 26/11ರ ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.

ಜೆಎನ್ ಯೂನಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಮುಖವನ್ನು ಬಟ್ಟೆಯಿಂದ ಮುಚ್ಚಿಟ್ಟುಕೊಂಡಿದ್ದರು? ಅವರು ಯಾಕೆ ಮುಖ ಮುಚ್ಚಿಕೊಂಡಿದ್ದರು? ಇದೆಲ್ಲ ನೋಡಿದರೆ 26/11ರ ಮುಂಬೈ ಉಗ್ರ ದಾಳಿಯನ್ನು ನೆನಪಿಸುತ್ತದೆ. ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ಹೇಳಿದ್ದಾರೆ. 

ಹಿಂಸಾಚಾರದಲ್ಲಿ ಪಾಲ್ಗೊಳ್ಳುವವರನ್ನು ಮರೆಮಾಚುವ ಅವಶ್ಯಕತೆಯಿತ್ತೆ. ಅವರ ಮುಖಗಳು ಇಡೀ ದೇಶಕ್ಕೆ ತಿಳಿದಿರಬೇಕು. ಸರಿಯಾದ ಸಮಯದಲ್ಲಿ ಅವರು ಬಹಿರಂಗಗೊಳ್ಳುತ್ತಾರೆ ಎಂದು ಠಾಕ್ರೆ ಹೇಳಿದರು. 

ಇದೇ ವೇಳೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿದ ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದಾಳಿ ಪೂರ್ವನಿಯೋಜಿತವಾಗಿದೆ. ಅದಕ್ಕಾಗಿಯೇ ಅವರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಬಂದಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com