ದುಷ್ಕರ್ಮಿಗಳ ಗುರಿ ನಾನೇ ಆಗಿದ್ದೆ: ಜೆಎನ್ ಯುಎಸ್ ಯು ಅಧ್ಯಕ್ಷೆ ಐಶೆ ಘೋಶ್

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ ನಲ್ಲಿ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳ ಗುರಿ ನಾನೇ ಆಗಿದ್ದೆ ಎಂದು ಜೆಎನ್ ಯುಎಸ್ ಯು ಅಧ್ಯಕ್ಷೆ ಐಶೆ ಘೋಶ್ ಹೇಳಿದ್ದಾರೆ.
ಗಾಯಗೊಂಡಿರುವ ಐಶೆ ಘೋಶ್
ಗಾಯಗೊಂಡಿರುವ ಐಶೆ ಘೋಶ್

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ ನಲ್ಲಿ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳ ಗುರಿ ನಾನೇ ಆಗಿದ್ದೆ ಎಂದು ಜೆಎನ್ ಯುಎಸ್ ಯು ಅಧ್ಯಕ್ಷೆ ಐಶೆ ಘೋಶ್ ಹೇಳಿದ್ದಾರೆ.

ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಜೆಎನ್ ಯುಎಸ್ ಯು ಅಧ್ಯಕ್ಷೆ ಐಶೆ ಘೋಶ್ ಹಾಗೂ ಉಪಾಧ್ಯಕ್ಷ ಸಾಕೇತ್ ಮೂನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪೈಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐಶೆ ಘೋಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದುಷ್ಕರ್ಮಿಗಳು ನನ್ನನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿದ್ದಾರೆ. ಉದ್ದೇಶ ಪೂರ್ವಕವಾಗಿ ನಮ್ಮ ಮೇಲೆ ದಾಳಿಯಾಗಿದ್ದು, ಇದು ಪೂರ್ವ ನಿಯೋಜಿತ ದಾಳಿ ಎಂದು ಹೇಳಿದ್ದಾರೆ.

ಸುಮಾರು 20 ರಿಂದ 25 ಮಂದಿ ಮಾಸ್ಕ್ ಧರಿಸಿದ್ದ ಗೂಂಡಾಗಳು ಲಾಠಿ ದೊಣ್ಣೆಗಳನ್ನು ಹಿಡಿದು ನಮ್ಮ ಪೀಸ್ ಮಾರ್ಚ್ ಅನ್ನು ಹಾಳು ಗೆಡವಿದರು. ಈ ವೇಳೆ ನನ್ನ ತಲೆಗೆ ಬಲವಾದ ಪೆಟ್ಟು ಬಿತ್ತು ಎಂದು ಐಶೆ ಘೋಶ್ ಹೇಳಿದರು. 

ಮೂಲಗಳ ಪ್ರಕಾರ, 'ಇಡೀ ರಾಷ್ಟ್ರದಾದ್ಯಂತ ಇಂದು ಎಡಪಂಥದ ಚಳುವಳಿಯಲ್ಲಿ ತೊಡಗಿರುವವರು ದಾಳಿಗಳನ್ನು ಎದುರಿಸುತ್ತಾ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ. ಐಶೆ ಘೋಶ್ ಸಹ ಎಡಪಂಥ ಚಳುವಳಿಯಲ್ಲಿ ತೊಡಗಿಕೊಂಡಿದ್ದರು. ಇದಲ್ಲದೆ, ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟಿಸಿದ್ದರು. ವಿದ್ಯಾರ್ಥಿಗಳ ಜೊತೆಗೆ ಸಂವಾದ ಏರ್ಪಡಿಸಿದ್ದರು ಇದೇ ಕಾರಣಕ್ಕೆ ಅವರ ಮೇಲೆ ದಾಳಿಯಾಗಿದೆ ಎಂದು ಜೆಎನ್ ಯುಎಸ್ ಯು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com