ಜಾರ್ಖಂಡ್: ಪೊಲೀಸರ ಹತ್ಯೆಗೈದು ಪರಾರಿಯಾಗಿದ್ದ 7 ನಕ್ಸಲರ ಬಂಧನ

ಪೊಲೀಸರ ಮೇಲೆ ದಾಳಿ ಮಾಡಿ 4 ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ 7 ಮಂದಿ ನಕ್ಸಲರನ್ನು ಬಂಧಿಸುವಲ್ಲಿ ಕೊನೆಗೂ ಜಾರ್ಖಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕ್ಸಲರ ಬಂಧನ
ನಕ್ಸಲರ ಬಂಧನ

ರಾಂಚಿ: ಪೊಲೀಸರ ಮೇಲೆ ದಾಳಿ ಮಾಡಿ 4 ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ 7 ಮಂದಿ ನಕ್ಸಲರನ್ನು ಬಂಧಿಸುವಲ್ಲಿ ಕೊನೆಗೂ ಜಾರ್ಖಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಹಿಂದೆ ಅಂದರೆ ನವೆಂಬರ್ 22ರಂದು ಜಾರ್ಖಂಡ್ ನ ಚಾಂದ್ವಾದಲ್ಲಿ ಪೊಲೀಸ್​ ಮತ್ತು ಗಸ್ತು ಸಿಬ್ಬಂದಿ ಮೇಲೆ ನಕ್ಸಲರ ತಂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 4 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಘಟನೆ ಜಾರ್ಖಂಡ್ ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಬಳಿಕ ಹತ್ಯೆಗೈದ ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ತಂತ್ರ ರೂಪಿಸಿದ್ದ ಜಾರ್ಖಂಡ್ ಪೊಲೀಸರು ಇಂದು ನಕ್ಸಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮಾವಾರ ತ್ರಿತೀಯ ಪ್ರಸ್ತುತಿ ಕಮಿಟಿಯು(ಟಿಪಿಸಿ) ಈ ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲುನಾಥ್​​ನ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸುತ್ತಿದ್ದ ವೇಳೆ ಪೊಲೀಸರು 7 ಮಂದಿ ನಕ್ಸಲರನ್ನು ಬಂಧಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಲತೇಹಾರ್ ಎಸ್ ಪಿ ಪ್ರಶಾಂತ್ ಆನಂದ್ ಅವರು, ಟಿಪಿಸಿ ನಕ್ಸಲರ ಇರುವಿಕೆ ಕುರಿತು ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ರೂಪಿಸಲಾಗಿತ್ತು. ಬಲೂಮತ್ ಮತ್ತು ಲಾವಲಾಂಗ್ ಪೊಲೀಸ್ ಠಾಣೆಗಳ ಗಡಿ ಪ್ರದೇಶದಲ್ಲಿ ನಕ್ಸಲರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಬಂಧಿತ ನಕ್ಸಲರನ್ನು ಕೂಡಲೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com