ವೇತನ ಕಡಿತ, ಶಿಸ್ತುಕ್ರಮ! ನಾಳಿನ ಮುಷ್ಕರದಲ್ಲಿ ಭಾಗವಹಿಸುವ ನೌಕರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಕಾರ್ಮಿಕ ಸುಧಾರಣೆಗಳು, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಜನವರಿ 8ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರವು ಎಚ್ಚರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಪಾಲ್ಗೊಳ್ಳುವುದಿಲ್ಲ: ಸ್ಪಷ್ಟನೆ

ನವದೆಹಲಿ/ಬೆಂಗಳೂರು: ಕಾರ್ಮಿಕ ಸುಧಾರಣೆಗಳು, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಜನವರಿ 8ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರವು ಎಚ್ಚರಿಸಿದೆ.

ಭಾರತೀಯ ಮಜ್ದೂರ್ ಸಂಘವನ್ನು ಹೊರತುಪಡಿಸಿ, ಕೇಂದ್ರೀಯ ಟ್ರೇಡ್ ಯೂನಿಯನ್ಮತ್ತು ವಿವಿಧ ವಲಯಗಳಲ್ಲಿನ ಅವರ ಅಂಗಸಂಸ್ಥೆಗಳು ಜನವರಿ 8 ರಂದು ತಮ್ಮ ಉದ್ದೇಶಿತ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕಾಗಿ ಕಾರ್ಮಿಕರು ಮತ್ತು ನೌಕರರನ್ನು ಸಜ್ಜುಗೊಳಿಸುತ್ತಿವೆ, ಕೇಂದ್ರ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸಿ ಮತ್ತು 12 ಅಂಶಗಳ ಸಾಮಾನ್ಯ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಲಲಾಗುತ್ತಿದೆ.

ಈ ವೇಳೆ ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯದ ಆದೇಶ ಹೊರಡಿಸಿದ್ದು "ಯಾವುದೇ ರೂಪದಲ್ಲಿ ಮುಷ್ಕರ ನಡೆಸುವ ಯಾವುದೇ ನೌಕರನು ಕಠಿಣ ಪರಿಣಾಮ ಎದುರಿಸಬೇಕಾಗುವುದು ವೇತನಕಡಿತದ ಜತೆಗೆ  ಸೂಕ್ತ ಶಿಸ್ತು ಕ್ರಮವನ್ನೂ ಸಹ  ಜರುಗಿಸಲಾಗುವುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ನೀಡಲಾದ ಆದೇಶ ಪ್ರತಿಯಲ್ಲಿ ಸರ್ಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಲು ಯಾವುದೇ ರೀತಿ ರಜಾ ಸೌಲಭ್ಯ ಬಳಕೆ ಮಾಡುವಂತಿಲ್ಲ ಅಲ್ಲದೆ ನಾಳೆ ಯಾವೊಬ್ಬ ನೌಕರರೂ ಸಹ ಕ್ಯಾಶುಯಲ್ ಲೀವ್ ಪಡೆದುಕೊಳ್ಲಬಾರದೆಂದು ಹೇಳಿದೆ ಸಂಘವನ್ನು ರಚಿಸುವ ಹಕ್ಕು ಮುಷ್ಕರ ಅಥವಾ ಪ್ರತಿಭಟಿಟನೆಯ  ಖಾತರಿಯ ಹಕ್ಕನ್ನು ಒಳಗೊಂಡಿಲ್ಲ ಎಂದು  ಆದೇಶದಲ್ಲಿ ಹೇಳಲಾಗಿದ್ದು "ಮುಷ್ಕರ ನಡೆಸಲು ನೌಕರರಿಗೆ ಅಧಿಕಾರ ನೀಡುವ ಯಾವುದೇ ಶಾಸನಬದ್ಧ ಅವಕಾಶವಿಲ್ಲ" ಎಂದು ಸಚಿವಾಲಯ ಹೇಳಿದೆ.

ಮುಷ್ಕರ ನಡೆಸುವುದು ನಿಯಮಗಳ ಅಡಿಯಲ್ಲಿ ನಡೆಯುವ ಗಂಭೀರ ದುಷ್ಕೃತ್ಯ ಮತ್ತು ಸರ್ಕಾರಿ ನೌಕರರ ದುಷ್ಕೃತ್ಯವನ್ನು ಕಾನೂನಿನ ಅನುಸಾರವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಒಪ್ಪಿಕೊಂಡಿದೆ."ಪ್ರಸ್ತಾವಿತ ಮುಷ್ಕರ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಕ್ಯಾಶುಯಲ್ ರಜೆ ಅಥವಾ ಯಾವುದೇ ರೀತಿಯ ರಜೆ ಮಂಜೂರು ಮಾಡದಂತೆ ಎಲ್ಲಾ ಅಧಿಕಾರಿಗಳಿಗೆ ಕೋರಲಾಗಿದೆ, ಮತ್ತು ಕಚೇರಿ ಆವರಣದಲ್ಲಿ ಮುಕ್ತ ಪ್ರವೇಶಕ್ಕೆ ಇಚ್ಚೆಯನುಸಾರ ಅಧಿಕಾರಿಗಳಿಗೆ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ"

ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಪಾಲ್ಗೊಳ್ಳುವುದಿಲ್ಲ: ಸ್ಪಷ್ಟನೆ

ಕೇಂದ್ರ ಸರ್ಕಾರದ ಜನ ವಿರೋಧಿ ನೀರಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳು ಸ್ಪಷ್ಟಪಡಿಸಿವೆ.

ಬೆಂಗಳೂರು ನಲ್ಲಿರುವ ಸರಕಾರಿ ಸ್ವಾಮ್ಯದ ಕಂಪನಿಗಳಾದ, ಬಿಇಎಂಎಲ್‌, ಹೆಚ್‌ಎಎಲ್‌, ಬಿಹೆಚ್‌ಇಎಲ್‌, ಡಿಆರ್‌ಡಿಓ, ಜಿಟಿಆರ್‌ಇ, ಐಟಿಐ, ಏಡಿಇ ಮುಂದಾದ ಸಂಸ್ಥೆಗಳು ಪಾಲ್ಗೊಳ್ಳುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ನಾವು ಈ ಹಿಂದೆ ಕೇಂದ್ರ ಸರಕಾರದ ಖಾಸಗೀಕರಣ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿದ್ದೇವು. ಆದರೆ ಈ ಸಾಮಾನ್ಯ ಮುಷ್ಕರಕ್ಕೆ ಸಿಎಎ ಮತ್ತು ಎನ್‌ಅರ್‌ಸಿ ಯಂತಹ ವಿಷಯಗಳು ಸಹ ಸೇರ್ಪಡೆಯಾಗಿವೆ. ಈ ಹಿನ್ನಲೆಯಲ್ಲಿ ನಾವು ನಮ್ಮ ಮುಷ್ಕರವನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com