ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು: ಗುಪ್ತಚರ ಇಲಾಖೆ ಮಾಹಿತಿ

ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಸ್ಫೋಟ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. 

Published: 07th January 2020 12:48 PM  |   Last Updated: 07th January 2020 12:50 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಸ್ಫೋಟ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. 

ಯೋಧರು ಸೇವನೆ ಮಾಡುವ ಆಹಾರ ಹಾಗೂ ಕುಡಿಯುವ ನೀರಿನಲ್ಲಿ ವಿಷ ಹಾಕಲು ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 

ಕೆಳದವಾದ ಭಾರತೀಯ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಮನೋಜ್ ಮುಕುಂದ್ ನರವಾಣೆಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಸುಳುವಿಕೆ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದ್ದು, ಇಂತಹ ಯತ್ನಗಳು ವಿಫಲಗೊಳ್ಳುವಂತೆ ಭಾರತೀಯೇ ಸೇನೆ ಮಾಡುತ್ತಿದೆ ಎಂದು ಹೇಳಿದ್ದರು. 

ಪಾಕಿಸ್ತಾನ ಗಡಿ ನಿಯಂತ್ರಣ ಪ್ರದೇಶದಲ್ಲಿ ಉಗ್ರರ ಶಿಬಿರಗಳು ಮುಂದುವರೆಸಿದ್ದು, ಭಾರತ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿ, ಕಣ್ಗಾವಲಿರಿಸಲಾಗಿದೆ. ಭಯೋತ್ಪಾದನೆ ಸಮಸ್ಯೆ ಹೊಸದಲ್ಲ. ಹಲವು ವರ್ಷಗಳಿಂದಲೂ ಇದೆ. ಉಗ್ರ ವಾದಕ್ಕೆ ದಿಟ್ಟ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದ್ದರು.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp