2022ರಲ್ಲಿ ನೂತನ ಕಟ್ಟಡದಲ್ಲಿ ಸಂಸತ್ ಅಧಿವೇಶನ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

2022 ರಲ್ಲಿ ದೇಶದ 75 ನೇ`ಸ್ವಾತಂತ್ರೋತ್ಸವ ವರ್ಷವನ್ನಾಚರಿಸಲಿದೆ. ಆ ಸಮಯದಲ್ಲಿ ಅಂದಿನ ಸಾಂಸತ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
 

Published: 08th January 2020 08:02 PM  |   Last Updated: 08th January 2020 08:03 PM   |  A+A-


ಸಂಸತ್ ಭವನ

Posted By : Raghavendra Adiga
Source : PTI

ಒಟ್ಟಾವಾ: 2022 ರಲ್ಲಿ ದೇಶದ 75 ನೇ`ಸ್ವಾತಂತ್ರೋತ್ಸವ ವರ್ಷವನ್ನಾಚರಿಸಲಿದೆ. ಆ ಸಮಯದಲ್ಲಿ ಅಂದಿನ ಸಾಂಸತ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

"... 'ನವ ಭಾರತ'ದ ಕನಸನ್ನು ಈಡೇರಿಸಲು.ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಭಾರತೀಯ ಸಂಸತ್ತು  ಅಧಿವೇಶನವು  2022 ರಲ್ಲಿ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ" ಎಂದು ಬಿರ್ಲಾ ಹೇಳಿದ್ದಾರೆ. ಕೆನಡಾದ ಒಟ್ಟಾವಾದಲ್ಲಿ ನಡೆದ 25 ನೇ ಕಾಮನ್ವೆಲ್ತ್ ಸ್ಪೀಕರ್ ಮತ್ತು ಅಧ್ಯಕ್ಷರ ಸಮ್ಮೇಳನದಲ್ಲಿ ಅವರು ಮಾತನಾಡಿದರು. 

1927ರಲ್ಲಿ ನಿರ್ಮಾಣಗೊಂಡ ಪ್ರಸ್ತುತ ಸಂಸತ್ ಭವನವು  92 ವಸಂತಗಳನ್ನು ಕಂಡಿದೆ. ಆದರೆ  ಲೋಕಸಭಾ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಸಂಸತ್ತಿನ ಸದಸ್ಯರು ಮತ್ತು ಸಿಬ್ಬಂದಿಗೆ ಸಾಕಷ್ಟು ಸ್ಥಳ ಮತ್ತು ಸೌಲಭ್ಯಗಳನ್ನು ಒದಗಿಸುವ ತುರ್ತು ಅವಶ್ಯಕತೆಯಿದೆ, ನವ ಭಾರತದ ಕನಸನ್ನು ನನಸಾಗಿಸಲು ನೂತನ ಸಂಸತ್ ಭವನ ನಿರ್ಮಾಣ ತುರ್ತಾಗಿ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ನವೀಕರಣ ಮತ್ತು ಪುನರ್ನಿರ್ಮಾಣವನ್ನು ಕೈಗೊಳ್ಳುವ ಮೊದಲು ಸಂಸತ್ತಿನ ಸದಸ್ಯರು ಮತ್ತು ಸಿಬ್ಬಂದಿಜತೆ ಸಮಾಲೋಚಿಸಲಾಗುವುದು ಮತ್ತು ಅದೂ ಸಹ ನಿಗದಿತ ಸಮಯದ ಮಿತಿಯೊಳಗೆ ಕನಿಷ್ಠ ಬಂಡವಾಳಮತ್ತು ಸಂಸತ್ತಿನ ಕಾರ್ಯಗಳಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೆ ಸಮಾಲೋಚಿಸಲಾಗುವುದು ಎಂದು ಬಿರ್ಲಾ ಸ್ಪಷ್ಟಪಡಿಸಿದರು. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಮುಂದಿನ 250 ವರ್ಷಗಳ ಅಗತ್ಯತೆಗಳನ್ನು ಪೂರೈಸುವುದು ಈ ಕಾರ್ಯಾಚರಣೆ ಉದ್ದೇಶವಾಗಿದೆ ಎಂದು ಸ್ಪೀಕರ್ ಹೇಳಿದರು.

"ಸಂಸತ್ ಭವನದ ವಾಸ್ತುಶಿಲ್ಪವು ರಾಜ್ಯ ಮತ್ತು ಅದರ ಜನರ ಆಕಾಂಕ್ಷೆಗಳನ್ನು ಸಂಕೇತಿಸುತ್ತದೆ; ಇದು ರಾಜ್ಯದ ಸ್ವರೂಪ, ಅದರ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಹ ನಿರೂಪಿಸುತ್ತದೆ" ಎಂದು ಬಿರ್ಲಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತು ಸಂಸತ್ತಿನ ನಿರಂತರ ಆದೇಶದಿಂದಾಗಿ, ವಿಶ್ವದಾದ್ಯಂತದ ಶಾಸಕಾಂಗಗಳು ಸಹ ವಿಸ್ತರಿಸುತ್ತಿವೆ ಎಂದು ಅವರು ಹೇಳಿದರು.

ಸಂಸತ್ತು ಕಟ್ಟಡದ ನವೀಕರಣ ಮತ್ತು ಪುನರ್ನಿರ್ಮಾಣವು ಸಾಂಸ್ಕೃತಿಕ, ತಾಂತ್ರಿಕ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪರಿವರ್ತನೆಗೆ ಅನುಕೂಲವಾಗುವಂತೆ ಸಂಸತ್ತಿನೊಂದಿಗೆ ನಾಗರಿಕರ ಅಂತರಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಪ್ರತಿಯಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಸ್ಪೀಕರ್ ಒತ್ತಿ ಹೇಳಿದರು.21 ನೇ ಶತಮಾನದ ಪ್ರಾಥಮಿಕ ಅವಶ್ಯಕತೆಗಳನ್ನು ಪರಿಹರಿಸಲು ವಿಶ್ವದಾದ್ಯಂತದ ಶಾಸಕಾಂಗಗಳು ಸಂಸದೀಯ ಕಟ್ಟಡಗಳನ್ನು ನವೀಕರಿಸಲು ಮತ್ತು ಪುನರಾಭಿವೃದ್ಧಿ ಮಾಡಲು ಚಿಂತಿಸುತ್ತಿವೆ ಎಂದು ಬಿರ್ಲಾ ಹೇಳಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp