ಜೆಎನ್ ಯು ಗೆ ದೀಪಿಕಾ ಪಡುಕೋಣೆ ಭೇಟಿ: ಪ್ರಕಾಶ್ ರಾಜ್ ಹೇಳಿದ್ದೇನು?

ನಟಿ ದೀಪಿಕಾ ಪಡುಕೋಣೆ ಜವಹರ್ ಲಾಲ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಕ್ಕೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ
ಪ್ರಕಾಶ್ ರೈ
ಪ್ರಕಾಶ್ ರೈ

ಬೆಂಗಳೂರು:  ನಟಿ ದೀಪಿಕಾ ಪಡುಕೋಣೆ ಜವಹರ್ ಲಾಲ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಕ್ಕೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. 

ದೀಪಿಕಾ  ನೀವು ರೀಲ್ ಮತ್ತು ರಿಯಲ್ ನಲ್ಲಿಯೂ ಬೋಲ್ಡ್ ಎಂದು ಫೋಟೋ ಹಾಕಿ ನಟ ಪ್ರಕಾಶ್ ರೈ ಮೆಚ್ಚುಗೆ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ಅವರ ನಟನೆಯ ಪದ್ಮಾವತ್, ಬಾಜೀರಾವ್ ಮಸ್ತಾನಿ, ರಾಮ್‍ಲೀಲಾ ಮತ್ತು ಛಪಾಕ್ ಸಿನಿಮಾದ ಫೋಟೋ ಹಾಕಿದ್ದಾರೆ. 

ಕೆಳಗೆ ಜೆಎನ್‍ಯುಗೆ ಭೇಟಿ ನೀಡಿರುವ ಫೋಟೋ ಹಾಕಿದ್ದಾರೆ. ರೀಲ್ ಮತ್ತು ರಿಯಲ್ ಲೈಫ್ ನಲ್ಲಿ ನೀವು ಧೈರ್ಯವಂತೆ (ಬೋಲ್ಡ್) ಎಂದು ಬರೆಯಲಾಗಿದೆ.

ನಿಜವಾದ ಭಾರತೀಯಳಾಗಿರುವುದಕ್ಕೆ ದೀಪಿಕಾ ಪಡುಕೋಣೆ ಅವರಿಗೆ ಧನ್ಯವಾದ ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.

ಪ್ರಕಾಶ್ ರೈ ಟ್ವೀಟ್ ಗೆ ಪರ-ವಿರೋಧ ಚರ್ಚೆಗಳ ಆರಂಭಗೊಂಡಿವೆ. ಕೆಲವರು ದೀಪಿಕಾ ಪಡುಕೋಣೆ ಅವರ ನಡೆಗೆ ತಮ್ಮ ಬೆಂಬಲ ಸೂಚಿಸಿದ್ರೆ, ಮತ್ತೆ ಕೆಲವರು ಸಿನಿಮಾ ಪ್ರಚಾರಕ್ಕಾಗಿ ದೀಪಿಕಾ ಜೆಎನ್‍ಯು ವಿಷಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com