'ಓ ದೇವರೇ, ಕೊನೆಗೂ ದಾರಿ ತೋರಿಸಿದೆ' ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸುವ ಪವನ್ ಜಲ್ಲದ್ ಹೀಗೆ ಹೇಳಿದ್ದೇಕೆ?

ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದ ನಂತರ ಉತ್ತರ ಪ್ರದೇಶದ ಜೈಲಧಿಕಾರಿಗಳಿಗೆ, ದೇವರಿಗೆ ಪವನ್ ಜಲ್ಲಾದ್ ಕೈಜೋಡಿಸಿ ನಮಸ್ಕರಿಸಿದ್ದಾರೆ.
'ಓ ದೇವರೇ, ಕೊನೆಗೂ ದಾರಿ ತೋರಿಸಿದೆ' ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸುವ ಪವನ್ ಜಲ್ಲದ್ ಹೀಗೆ ಹೇಳಿದ್ದೇಕೆ?

ಮೀರತ್: ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದ ನಂತರ ಉತ್ತರ ಪ್ರದೇಶದ ಜೈಲಧಿಕಾರಿಗಳಿಗೆ, ದೇವರಿಗೆ ಪವನ್ ಜಲ್ಲಾದ್ ಕೈಜೋಡಿಸಿ ನಮಸ್ಕರಿಸಿದ್ದಾರೆ.


ಇದಕ್ಕೆ ಕಾರಣ ಪವನ್ ಜಲ್ಲಾದ್ ಗೆ ಇರುವ ಹಣದ ಅವಶ್ಯಕತೆ. ಇಷ್ಟಕ್ಕೂ ಇವರ್ಯಾರು, ಇವರಿಗೆ ನೀಡಿರುವ ಕೆಲಸವೇನು ನೋಡೋಣ ಬನ್ನಿ:

ಉತ್ತರ ಪ್ರದೇಶದ ತಿಹಾರ್ ಜೈಲಿನಲ್ಲಿ ನಿರ್ಭಯಾ ಕೇಸಿನ ಅಪರಾಧಿಗಳಿಗೆ ಇದೇ ತಿಂಗಳ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವ ವ್ಯಕ್ತಿ ಪವನ್ ಜಲ್ಲದ್. ಪವನ್ ಅವರ ತಂದೆ ಮಮ್ಮು ಜಲ್ಲದ್ ಉತ್ತರ ಭಾರತದಲ್ಲಿ ಖ್ಯಾತ ಗಲ್ಲಿಗೇರಿಸುವ ವ್ಯಕ್ತಿಯಾಗಿದ್ದರು. ಅವರ ಕುಲ ವೃತ್ತಿಯೇ ಅದು, ಪವನ್ ಅವರ ತಾತ ಕಲ್ಲು ಜಲ್ಲದ್ ಮತ್ತು ತಂದೆ ಮಮ್ಮ ಜಲ್ಲದ್ ಇಂದಿರಾ ಗಾಂಧಿಯವರನ್ನು ಹತ್ಯೆ ಮಾಡಿದ್ದ ಸತ್ವಂತ್ ಸಿಂಗ್ ಮತ್ತು ಕೇಶರ್ ಸಿಂಗ್ ಅವರನ್ನು ನೇಣಿಗೆ ಹಾಕಿದ್ದರು. ತಮ್ಮ ವೃತ್ತಿಯಲ್ಲಿ ಅನೇಕರನ್ನು ಗಲ್ಲಿಗೇರಿಸಿದ್ದರು.


ಅವರಿಂದ ಪವನ್ ಅವರಿಗೆ ಈ ವೃತ್ತಿ ಮುಂದುವರಿದುಕೊಂಡು ಬಂದಿದೆ. ನಿರ್ಭಯಾ ಕೇಸಿನ ಅಪರಾಧಿಗಳನ್ನು ಗಲ್ಲಿಗೇರಿಸಲು ಪವನ್ ಅವರಿಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಬರುತ್ತದೆ. ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಲು ಸರ್ಕಾರ 25 ಸಾವಿರ ನೀಡುತ್ತದೆ. ಪವನ್ ಅವರಿಗೆ ಈ ಮೊತ್ತ ತುಂಬಾ ದೊಡ್ಡದು. ಅವರ ತಾತನಿಗೆ 200 ರೂಪಾಯಿ ಸಿಗುತ್ತಿತ್ತಂತೆ. 1989ರಲ್ಲಿ ಆಗ್ರಾ ಕೇಂದ್ರ ಕಾರಾಗೃಹದಲ್ಲಿ ತಮ್ಮ ತಾತನ ಜೊತೆ ಒಬ್ಬ ಅತ್ಯಾಚಾರಿ ಮತ್ತು ಕೊಲೆ ಅಪರಾಧಿಯನ್ನು ಗಲ್ಲಿಗೇರಿಸಿದ್ದಕ್ಕೆ ಪವನ್ ಅವರಿಗೆ ಅಂದು 200 ರೂಪಾಯಿ ಸಿಕ್ಕಿತ್ತಂತೆ. 


ಪವನ್ ಅವರಿಗೆ ಈಗ ಸಿಗುವ ಮೊತ್ತ ತುಂಬಾ ಮಹತ್ವದ್ದು ಏಕೆಂದರೆ ಮನೆಯಲ್ಲಿ ಬೆಳೆದು ನಿಂತಿರುವ ಮಗಳು. ''ನನ್ನ ಮಗಳ ಮದುವೆ ಖರ್ಚುವೆಚ್ಚಕ್ಕೆ ಹಣದ ಅವಶ್ಯಕತೆ ತುಂಬಾ ಇದೆ. ಏನು ಮಾಡುವುದು ಎಂದು ಯೋಚನೆಯಾಗುತ್ತಿತ್ತು. ಪೂರ್ವಿಕರಿಂದ ಸಿಕ್ಕಿದ ಮನೆಯ ಸ್ಥಿತಿಯೂ ಚಿಂತಾಜನಕವಾಗಿದೆ. ಅದನ್ನು ರಿಪೇರಿ ಮಾಡಲು ಹಣವಿಲ್ಲ. ಈಗಾಗಲೇ ಸಾಲ ಮಾಡಿಕೊಂಡಿದ್ದೇನೆ. ಸಾಲಗಾರರ ಕಾಟ ವಿಪರೀತವಾಗಿದೆ. ಹೀಗಾಗಿ ನಿರ್ಭಯಾ ಅತ್ಯಚಾರಿಗಳನ್ನು ಗಲ್ಲಿಗೇರಿಸಿದಾಗ ಸಿಗುವ ಹಣ ನನಗೆ ಹೊಸ ಜೀವನವೇ ಸಿಕ್ಕಂತಾಗುತ್ತದೆ'' ಎಂದರು.


ಉತ್ತರ ಪ್ರದೇಶದ ಜೈಲಿನಲ್ಲಿ ಕೆಲಸದಲ್ಲಿ ಇರುವ ಪವನ್ ಗೆ ತಿಂಗಳಿಗೆ ಸಿಗುವ ಸಂಬಳ ಕೇವಲ 5 ಸಾವಿರ ರೂಪಾಯಿ. ಬೇರೆ ಆದಾಯವೇನೂ ಇಲ್ಲ. ಗಲ್ಲು ಶಿಕ್ಷೆಯಿಂದ ಮಾತ್ರ ನನಗೆ ಸ್ವಲ್ಪ ಹೆಚ್ಚಿನ ಆದಾಯ ಸಿಗುತ್ತದೆ ಎನ್ನುತ್ತಾರೆ.


ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ದತೆ ಮಾಡಿಕೊಳ್ಳುವಂತೆ ಪವನ್ ಗೆ ಜೈಲಿನ ಅಧಿಕಾರಿಗಳು ಹೇಳಿದ್ದಾರಂತೆ. ನಾಳೆ, ನಾಡಿದ್ದರಲ್ಲಿ ಅವರು ತಿಹಾರ್ ಜೈಲಿಗೆ ಹೋಗುತ್ತಾರೆ. ಗಲ್ಲಿಗೇರಿಸುವ ದಿನ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮೀರತ್ ಜಿಲ್ಲಾಡಳಿತ ಕಾನ್ಶಿರಾಮ್ ಆವಾಸ್ ಯೋಜನೆಯಡಿ ಒಂದು ಕೋಣೆಯನ್ನು ಗಲ್ಲಿಗೇರಿಸುವ ವ್ಯಕ್ತಿಗೆ ಮೀಸಲಿಟ್ಟಿದ್ದು ಜಿಲ್ಲೆ ಬಿಟ್ಟು ಹೋಗದಂತೆ ಪವನ್ ಗೆ ತಿಳಿಸಿದ್ದಾರೆ.


ಗಲ್ಲಿಗೇರಿಸುವ ವ್ಯಕ್ತಿಗಳು ಸಾಮಾನ್ಯವಾಗಿ ಮದ್ಯವ್ಯಸನಿಗಳಾಗಿರುತ್ತಾರೆ ಎಂಬ ಜನರಲ್ಲಿರುವ ನಂಬಿಕೆ ಸುಳ್ಳು ಎನ್ನುವ ಪವನ್ ಎಂದಿಗೂ ಆಲ್ಕೋಹಾಲ್ ತೆಗೆದುಕೊಂಡಿಲ್ಲವಂತೆ. ಯಾವುದೇ ಅಪರಾಧಿಯನ್ನು ಗಲ್ಲಿಗೇರಿಸುವ ಮುನ್ನ ಗಲ್ಲಿಗೇರಿಸುವವರು ಮದ್ಯ ಸೇವಿಸುತ್ತಾರೆ ಎಂಬ ನಂಬಿಕೆ ಸುಳ್ಳು. ನಾನು ಯಾವತ್ತೂ ಕುಡಿದೇ ಇಲ್ಲ. ಅಪರಾಧಿಯನ್ನು ನೇಣಿಗೆ ಏರಿಸಿ ಹಗ್ಗ ಎಳೆಯುವಾಗ ಶಾಂತ ರೀತಿಯಿಂದ ಸಂಯಮದಿಂದ ವರ್ತಿಸುತ್ತೇವೆ, ಅದು ನಮ್ಮ ಕೆಲಸ ಎನ್ನುತ್ತಾರೆ ಪವನ್ ಜಲ್ಲದ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com