ಸಿಎಎಗೆ ವಿದ್ಯಾರ್ಥಿಗಳ ಅಸಮ್ಮತಿ ನನ್ನಲ್ಲಿ ಭರವಸೆ ಮೂಡಿಸಿದೆ: ಥಿಂಕ್ ಎಡುನಲ್ಲಿ ಶಶಿ ತರೂರ್

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ವಿರೋಧಿಸಿ ಇತ್ತೀಚಿಗೆ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮತ್ತು ವಿವಾದಾತ್ಮಕ ಕಾಯ್ದೆಗೆ ಸಮ್ಮತಿ ನೀಡದಿರುವುದು...
ಶಶಿ ತರೂರ್
ಶಶಿ ತರೂರ್

ಚೆನ್ನೈ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ವಿರೋಧಿಸಿ ಇತ್ತೀಚಿಗೆ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮತ್ತು ವಿವಾದಾತ್ಮಕ ಕಾಯ್ದೆಗೆ ಸಮ್ಮತಿ ನೀಡದಿರುವುದು ನನ್ನಲ್ಲೂ ಭರವಸೆ ಮೂಡಿಸಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬುಧವಾರ ಹೇಳಿದ್ದಾರೆ.

ಇಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಥಿಂಕ್ ಎಡು ಕಾಂಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಶಶಿ ತರೂರ್ ಅವರು, ವಿದ್ಯಾರ್ಥಿಗಳು ತಮ್ಮದೇ ಆದ ವಿಚಾರಧಾರೆಯನ್ನು ಹೊಂದಿದ್ದಾರೆ. ಅವರನ್ನು ಮುನ್ನಡೆಸಲು ಯಾವುದೇ ರಾಜಕಾರಣಿಗಳ ಅಗತ್ಯವಿಲ್ಲ. ಏಕೆಂದರೆ ಅವರೆಲ್ಲರೂ ಹೃದಯದಿಂದ ಮತ್ತು ನಿಶ್ಚಿತವಾಗಿ ಮಾತನಾಡುತ್ತಿದ್ದಾರೆ ಎಂದರು.

"ಪ್ರಜಾಪ್ರಭುತ್ವವು ಒಂದು ಪ್ರಕ್ರಿಯೆ, ಅದೊಂದು ಕಾರ್ಯಕ್ರಮ ಅಲ್ಲ ಮತ್ತು ಅದು ಖಂಡಿತವಾಗಿಯೂ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಜಾಪ್ರಭುತ್ವಕ್ಕೆ ನಿರಂತರ ನಾಗರಿಕರ ಭಾಗವಹಿಸುವಿಕೆಯ ಅಗತ್ಯವಿರುತ್ತದೆ. ಇದು ನಡೆಯುತ್ತಿರುವ ಸಂಭಾಷಣೆಯಾಗಿದೆ. ಸರ್ಕಾರ ಒಂದೇ ಎಲ್ಲ ಉತ್ತರಗಳನ್ನು ಹೊಂದಲು ಸಾಧ್ಯವಿಲ್ಲ. ಅವರು ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾವು ಏನು ಬೇಕಾದರೂ ಮಾಡಬಹುದು ಎಂದು ಭಾವಿಸುವುದು ತಪ್ಪು ಎಂದಿದ್ದಾರೆ.

"ಬುದ್ಧನಿಂದ ಅಂಬೇಡ್ಕರ್ ವರೆಗೆ, ಭಿನ್ನಮತೀಯರು ಯಾವಾಗಲೂ ನಮ್ಮ ಇತಿಹಾಸದ ಒಂದು ಭಾಗವಾಗಿದ್ದಾರೆ ಮತ್ತು ಅದರಲ್ಲಿ ಒಂದು ಪವಿತ್ರ ಸ್ಥಳವಿದೆ. ಇತ್ತೀಚಿನ ದಿನಗಳಲ್ಲಿ ನಾವು ದೇಶದ ಹಲವು ಭಾಗದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದೇವೆ. ಈ ಮೂಲಕ ವಿಶ್ವದ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದ್ದೇವೆ. ಕಾಶ್ಮೀರದಲ್ಲಿ ಐದು ತಿಂಗಳ ಕಾಲ ಸಂವಹನ ದಿಗ್ಬಂಧನ ವಿಧಿಸಲಾಗಿತ್ತು. ಅಸ್ಸಾಂನಲ್ಲಿ ಐದು ದಿನಗಳವರೆಗೆ ಮತ್ತು ದೆಹಲಿಯಲ್ಲಿ ಐದು ಗಂಟೆಗಳವರೆಗೆ ಸಂವಹನ ಸ್ಥಗಿತಗೊಳಿಸಲಾಗಿತ್ತು. ಅಲ್ಲಿ ಏನಾಯಿತು ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಶಶಿ ತರೂರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com