ನ್ಯಾ. ಲೋಯಾ ಸಾವಿನ ಪ್ರಕರಣ ಮರುತನಿಖೆಗೆ ಸರ್ಕಾರ ಮುಕ್ತವಾಗಿದೆ: ಮಹಾರಾಷ್ಟ್ರ ಗೃಹ ಸಚಿವ

ಸಿಬಿಐ ವಿಶೇಷ ನ್ಯಾಯಾಧೀಶ ಬಿ ಹೆಚ್ ಲೋಯಾ ಸಾವಿನ ಕುರಿತು ಮರು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರದ ಆಯ್ಕೆ ಮುಕ್ತವಾಗಿದೆ ಎಂದು  ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.
ನ್ಯಾಯಾಧೀಶ ಬಿ ಹೆಚ್ ಲೋಯಾ
ನ್ಯಾಯಾಧೀಶ ಬಿ ಹೆಚ್ ಲೋಯಾ

ಮುಂಬೈ: ಸಿಬಿಐ ವಿಶೇಷ ನ್ಯಾಯಾಧೀಶ ಬಿ ಹೆಚ್ ಲೋಯಾ ಸಾವಿನ ಕುರಿತು ಮರು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರದ ಆಯ್ಕೆ ಮುಕ್ತವಾಗಿದೆ ಎಂದು  ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.

ಗುಜರಾತ್‌ನಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯಾ, ಸಹೋದ್ಯೋಗಿಯ ಮಗಳ ಮದುವೆಗೆ ತೆರಳಿದ್ದ ವೇಳೆ  ನಾಗ್ಪುರದಲ್ಲಿ 2014 ರ ಡಿಸೆಂಬರ್ 1 ರಂದು ಹೃದಯ ಸ್ತಂಭನದಿಂದ ನಿಧನರಾದರು.

ಲೋಯಾ ಸಾವಿನ ಪ್ರಕರಣವನ್ನು ಮರು ತನಿಖೆ ಮಾಡಲು ನಮ್ಮ ಸರ್ಕಾರ ಮುಕ್ತವಾಗಿದೆ. ಪ್ರಕರಣವನ್ನು ಮತ್ತೆ ತೆರೆಯಬೇಕೆಂದು ಒತ್ತಾಯಿಸಿ ಕೆಲವರು ಇಂದು ನನ್ನನ್ನು ಭೇಟಿಯಾಗಿದ್ದರು. ನಾನು ಅವರ ಮನವಿ ಆಲಿಸಿದ್ದೇನೆ. ಗತ್ಯವಿದ್ದರೆ ಪ್ರಕರಣವನ್ನು ಮರು ತನಿಖೆ ಮಾಡಲಾಗುವುದು ಎಂದು ದೇಶ್ ಮುಖ್ ಸುದ್ದಿಗಾರರಿಗೆ ತಿಳಿಸಿದರು

ಲೋಯಾ ಅವರ ಕುಟುಂಬ ಸದಸ್ಯರು ಗೃಹ ಸಚಿವರನ್ನು ಭೇಟಿಯಾಗುವರೆ ಎಂದು ಕೇಳಲಾಗಿ "ನಾನು ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ.ಏತನ್ಮಧ್ಯೆ ದೇಶ್ ಮುಖ್ ಬುಧವಾರ ರಾತ್ರಿ ಪಾಟ್ನಾದಿಂದ ಪರಾರಿಯಾದ ದರೋಡೆಕೋರ ದಾವೂದ್ ನ ಮಾಜಿ ಸಹಚರ ಇಜಾಜ್ ಲಕ್ಡಾವಾಲಾ ಬಂಧಿಸಿದ್ದ ಪೋಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com