ಭಯಾನಕ ವಿಡಿಯೋ: ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಬಿದ್ದ ಮಗು, ವಿಡಿಯೋ ವೈರಲ್!

ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಪುಟ್ಟ ಮಗು ರಸ್ತೆ ಮೇಲೆ ಬಿದ್ದಿದ್ದು ಈ ಭೀಕರ ವಿಡಿಯೋ ನೋಡುಗರ ಎದೆ ಬಡಿತವೇ ನಿಂತಂತಾಗುತ್ತದೆ. ಈ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರಿನ ದೃಶ್ಯ
ಕಾರಿನ ದೃಶ್ಯ

ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಪುಟ್ಟ ಮಗು ರಸ್ತೆ ಮೇಲೆ ಬಿದ್ದಿದ್ದು ಈ ಭೀಕರ ವಿಡಿಯೋ ನೋಡುಗರ ಎದೆ ಬಡಿತವೇ ನಿಂತಂತಾಗುತ್ತದೆ. ಈ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೇಗವಾಗಿ ಬರುತ್ತಿದ್ದಾಗ ರಸ್ತೆ ತಿರುವಿನಲ್ಲಿ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಮಗು ರಸ್ತೆಗೆ ಬಿದ್ದಿದೆ. ಕ್ಷಣ ಮಾತ್ರದಲ್ಲಿ ಎದುರಿಗೆ ಬರುತ್ತಿದ್ದ ಬಸ್ ಮತ್ತು ಕಾರಿನ ಹಿಂದೆ ಬರುತ್ತಿದ್ದ ವ್ಯಾನ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿ ನಿಂತವು. ಇಲ್ಲದಿದ್ದರೆ ದೊಡ್ಡ ದುರಂತವೇ ನಡೆದು ಹೋಗುತ್ತಿತ್ತು. ಕೂಡಲೇ ಕಾರಿನಿಂದ ಇಳಿದ ತಂದೆ ಮಗುವನ್ನು ಎತ್ತಿಕೊಂಡಿದ್ದಾರೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಎಂಬುವರು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮಕ್ಕಳ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆಯೂ ಸಂದೇಶ ನೀಡಿದ್ದಾರೆ.

ಕೇರಳದಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಸಹ ರಾತ್ರಿಯಲ್ಲಿ ಜೀಪ್ ವೊಂದರಿಂದ ಮಗುವೊಂದು ಕೆಳಗೆ ಬಿದ್ದು ಸುಮಾರು 30 ನಿಮಿಷಗಳ ಕಾಲ ರಸ್ತೆಯಲ್ಲಿ ನೋವಿನಿಂದ ಚೀರಾಡುತ್ತಾ ಓಡಾಡುತ್ತಿತ್ತು. ಮಗುವನ್ನು ಗಮನಿಸಿದ ಸ್ಥಳೀಯರೊಬ್ಬರು ಮಗುವನ್ನು ರಕ್ಷಿಸಿದ್ದರು. ಈ ವಿಡಿಯೋ ಸಹ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com