ದೀಪಿಕಾ ಪಡುಕೋಣೆ ಅವರ ರಾಜಕೀಯ ಸಂಬಂಧ ಏನು ಎಂದು ತಿಳಿಯಲು ಬಯಸುತ್ತೇನೆ: ಸ್ಮೃತಿ ಇರಾನಿ 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ರಾಜಕೀಯ ಸಂಬಂಧವೇನು ಎಂದು ತಿಳಿದುಕೊಳ್ಳಲು ನಾನು ಬಯಸುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೇಳಿದ್ದಾರೆ.
ಥಿಂಕ್ ಎಡು ಸಮ್ಮೇಳನದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಥಿಂಕ್ ಎಡು ಸಮ್ಮೇಳನದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಚೆನ್ನೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ರಾಜಕೀಯ ಸಂಬಂಧವೇನು ಎಂದು ತಿಳಿದುಕೊಳ್ಳಲು ನಾನು ಬಯಸುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೇಳಿದ್ದಾರೆ.

ಮೊನ್ನೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ ಬಗ್ಗೆ ಸುದ್ದಿ ಓದಿದವರಿಗೆ ಅವರು ಪ್ರತಿಭಟನಾಕಾರರ ಜೊತೆ ಏಕೆ ಭಾಗಿಯಾಗಿದ್ದರು ಎಂದು ಗೊತ್ತಾಗುತ್ತದೆ ಎಂದು ಕೂಡ ಸ್ಮೃತಿ ಇರಾನಿ ಹೇಳಿದ್ದಾರೆ. ಅವರು ನಿನ್ನೆ ಚೆನ್ನೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಏರ್ಪಡಿಸಿದ್ದ ಥಿಂಕ್ ಎಡು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. 


ಭಾರತದ ವಿನಾಶಕ್ಕೆ ಬಯಸುತ್ತಿರುವ ಜನರ ಜೊತೆ ಹೋಗಿ ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ನಿಂತು ಬೆಂಬಲ ನೀಡಿದ್ದು ನಮಗೆ ಅನಿರೀಕ್ಷಿತ ಮತ್ತು ಅಚ್ಚರಿಯೆಂದು ಅನಿಸಲಿಲ್ಲ. ಹುಡುಗಿಯರಿಗೆ ಅವರ ಖಾಸಗಿ ಅಂಗಗಳ ಮೇಲೆ ಲಾಠಿಯಿಂದ ಹೊಡೆಯುವವರ ಜೊತೆ ಹೋಗಿ ದೀಪಿಕಾ ನಿಂತಿದ್ದರು. ಅವರಿಗೆ ಅದು ಸರಿ ಅನಿಸಿ ಅಲ್ಲಿಗೆ ಹೋಗಿದ್ದರು. 2011ರಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದ ದೀಪಿಕಾ ಅವರ ರಾಜಕೀಯ ಸಂಬಂಧವೇನು ಎಂಬುದು ಗೊತ್ತಾಗಿದೆ. ಜನರಿಗೆ ಅವರು ಹೋಗಿದ್ದು ಅಚ್ಚರಿಯಾಗಿರಬಹುದು, ಏಕೆಂದರೆ ಅವರಿಗೆ ಅದು ಗೊತ್ತಿರಲಿಲ್ಲ. ಅವರ ಅನೇಕ ಅಭಿಮಾನಿಗಳಿಗೆ ಅವರ ನಿಲುವೇನು ಎಂಬುದು ಈಗ ಗೊತ್ತಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com