ಇಂಡೋ-ಬಾಂಗ್ಲಾ ಗಡಿಗೆ ಅತ್ಯಾಧುನಿಕ, ಕತ್ತರಿಸಲಾಗದ ತಂತಿ ಬೇಲಿ ನಿರ್ಮಾಣ!

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ತಂತಿ ಬೇಲಿಗಳು ಇನ್ನು ಮುಂದೆ ಮತ್ತಷ್ಟು ಗಟ್ಟಿಯಾಗಲಿದ್ದು, ಗಡಿಯಲ್ಲಿ ಶೀಘ್ರ ಅತ್ಯಾಧುನಿಕ, ಕತ್ತರಿಸಲಾಗದ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ತಂತಿ ಬೇಲಿಗಳು ಇನ್ನು ಮುಂದೆ ಮತ್ತಷ್ಟು ಗಟ್ಟಿಯಾಗಲಿದ್ದು, ಗಡಿಯಲ್ಲಿ ಶೀಘ್ರ ಅತ್ಯಾಧುನಿಕ, ಕತ್ತರಿಸಲಾಗದ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿರುವ ದಶಕಗಳ ಹಳೆಯ ಮುಳ್ಳು ತಂತಿ ಬೇಲಿಗಳನ್ನು ಬದಲಿಸಲು ರಕ್ಷಣಾ ಇಲಾಖೆ ಮುಂದಾಗಿದ್ದು, ಈಗಿರುವ ಬೇಲಿಗಳನ್ನು ಕಿತ್ತು ಅದೇ ಜಾಗದಲ್ಲಿ ಅತ್ಯಾಧುನಿಕ ಮತ್ತು ಕತ್ತರಿಸಲಾಗದ ತಂತಿಬೇಲಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಲತಿತಿಲಾ ಸಿಲ್ಚಾರ್ ವಲಯದಲ್ಲಿ ಈ ಅತ್ಯಾಧುನಿಕ ಕತ್ತರಿಸಲಾಗದ ತಂತಿಬೇಲಿಗಳ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಾಂಗ್ಲಾ ಗಡಿಯುದ್ದಕ್ಕೂ ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಒಟ್ಟು 7.18 ಕಿ.ಮೀ ವ್ಯಾಪ್ತಿಯಲ್ಲಿ 14. 30 ಕೋಟಿ ರೂ ವೆಚ್ಚದಲ್ಲಿ ಈ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಅಂದರೆ ಪ್ರತೀ ಕಿಮೀ ಗೆ ಸರಿಸುಮಾರು 1.99 ಕೋಟಿ ರೂ ವೆಚ್ಚದಲ್ಲಿ ತಂತಿ ಬೇಲಿ ನಿರ್ಮಾಣವಾಗುತ್ತಿದೆ. ಇದೇ ರೀತಿಯ ಅತ್ಯಾಧುನಿಕ ತಂತಿ ಬೇಲಿಯನ್ನು ಭಾರತ-ಪಾಕ್ ಗಡಿಯಲ್ಲೂ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇನ್ನು ಈ ಕತ್ತರಿಸಲಾಗದ ತಂತಿ ಬೇಲಿಗಳು ಅಕ್ರಮ ನುಸುಳುವಿಕೆಯನ್ನು ತಡೆಯುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com