ಅಕ್ರಮ ಸಂಬಂಧ: ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ, ಆಕೆ ತಗ್ಲಾಕೊಂಡ ಕಥೆ ರೋಚಕ!

ಗಂಡ ದೇಶಕಾಯಲು ತೆರಳಿದ್ದಾಗ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಸೊಸೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ ಆರು ತಿಂಗಳ ನಂತರ ತಗ್ಲಾಕೊಂಡಿದ್ದಾಳೆ.

Published: 10th January 2020 04:49 PM  |   Last Updated: 10th January 2020 04:49 PM   |  A+A-


Alpana-Subodh Devi

ಅಲ್ಪನಾ-ಸುಬೋಧ್ ದೇವಿ

Posted By : Vishwanath S
Source : Online Desk

ಜುಂಜುನು(ರಾಜಸ್ತಾನ): ಗಂಡ ದೇಶಕಾಯಲು ತೆರಳಿದ್ದಾಗ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಸೊಸೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ ಆರು ತಿಂಗಳ ನಂತರ ತಗ್ಲಾಕೊಂಡಿದ್ದಾಳೆ. 

ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಪನಾ ಎಂಬಾಕೆ ತನ್ನ ಅತ್ತೆ ಸುಬೋಧ್ ದೇವಿ ಎಂಬವರನ್ನು ಹಾವಿನಿಂದ ಕಚ್ಚಿಸಿ ಕೊಲ್ಲಿಸಿದ್ದಳು ಎಂಬ ವಿಚಾರವನ್ನು ಪೊಲೀಸರು ತನಿಖೆ ಮೂಲಕ ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಸೊಸೆ ಅಲ್ಪನಾ ಮತ್ತು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

2018ರಲ್ಲಿ ಅಲ್ಪನಾ ಸಚಿನ್ ಎಂಬುವರನ್ನು ವಿವಾಹವಾಗಿದ್ದರು. ಸಚಿನ್ ಮತ್ತು ಅವನ ಸಹೋದರ ಚಿರಂತನ್ ಇಬ್ಬರೂ ಭಾರತೀಯ ಯೋಧರು. ಮಾವ ರಾಜೇಶ್ ಕೂಡ ಕೆಲಸ ನಿಮಿತ್ತ ಹೊರಗಡೆಯೇ ಇರುತ್ತಿದ್ದರು. ಹೀಗಾಗಿ ಮನೆಯಲ್ಲಿ ಅತ್ತೆ ಮತ್ತು ಸೊಸೆ ಮಾತ್ರ ಮನೆಯಲ್ಲಿ ಇರುತ್ತಿದ್ದರು.

ಏಕಾಂಗಿಯಾಗಿರುತ್ತಿದ್ದ ಅಲ್ಪನಾ ಅವರು ಮನೀಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು. ಅಲ್ಲದೆ ಆತನ ಜೊತೆ ನಿರಂತರವಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದುದ್ದಕ್ಕೆ ಸುಬೋಧ್ ದೇವಿ ವಿರೋಧಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಅಲ್ಪನಾ ಮನೀಶ್ ಜೊತೆ ಸೇರಿ ಪತ್ತೆಯನ್ನು ಕೊಲ್ಲಿಸಲು ಸಂಚು ರೂಪಿಸಿದ್ದಳು. 

ಮೊದಲಿಗೆ ಪಾನಿಯಾದಲ್ಲಿ ವಿಷ ಸೇರಿಸಿ ಅತ್ತೆಗೆ ನೀಡಿದ್ದಾಳೆ. ದೇವಿ ನಿದ್ರೆಗೆ ಜಾರುತ್ತಿದ್ದಂತೆ ಕತ್ತು ಹಿಸುಕಿ ಸಾಯಿಸಿದ್ದಾರೆ. ಬಳಿಕ ಹಾವೊಂದನ್ನು ತಂದು ಕಚ್ಚಿಸಿದ್ದಾರೆ. ಇದರಿಂದ ಎಲ್ಲರೂ ಸುಬೋಧ್ ದೇವಿ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿತ್ತು. 

ಆದರೆ ಅಲ್ಪನಾ ನಡುವಳಿಕೆ ಕುರಿತು ಶಂಕೆ ವ್ಯಕ್ತವಾಗಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆಯಲ್ಲಿ ಘಟನೆ ನಡೆದ ದಿನ ಅಲ್ಪನಾ ಮನೀಶ್ ಜೊತೆ 124 ಕರೆ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp