ತಮ್ಮ ಅಲ್ಪಸಂಖ್ಯಾತರ ನೋಡಿಕೊಳ್ಳಲು ಸಾಧ್ಯವಾಗದವರು, ಇತರರಿಗೆ ಪಾಠ ಮಾಡುವ ಅಗತ್ಯವಿಲ್ಲ: ಪಾಕ್'ಗೆ ಭಾರತ

ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲು ಸಾಧ್ಯವಾಗದವರು, ಇತರರಿಗೆ ಹೇಗೆ ಮಾಡಬೇಕೆಂಬುದನ್ನು ಹೇಳುವ ಅಗತ್ಯವಿಲ್ಲ ಎಂದು ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲು ಸಾಧ್ಯವಾಗದವರು, ಇತರರಿಗೆ ಹೇಗೆ ಮಾಡಬೇಕೆಂಬುದನ್ನು ಹೇಳುವ ಅಗತ್ಯವಿಲ್ಲ ಎಂದು ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ. 

ಗುರುದ್ವಾರ ನಾನಕ್ ಸಾಹಿಬ್ ಹಾಗೂ ಸಿಖ್ಕ್ ವ್ಯಕ್ತಿಯ ಹತ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಗುಡುಗಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಸಿಖ್ ವ್ಯಕ್ತಿ ಹಾಗೂ ಗುರುದ್ವಾರದ ಮೇಲಿನ ದಾಳಿ ಪಾಕಿಸ್ತಾನಕ್ಕೆ ಹಿಡಿದ ಕನ್ನಡಿಯಾಗಿದ. ಇತರರಿಗೆ ಪಾಠ ಮಾಡುವುದನ್ನು ಹೇಳುತ್ತಿರುವವರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ. 

ಅಲ್ಲದೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಕೂಡ ವಾಗ್ದಾಳಿ ನಡೆಸಿರುವ ಅವರು, ತಮ್ಮ ಕೆಲಸದ ಬಗ್ಗೆ ನಿರ್ಲಕ್ಷ್ಯವಹಿಸಿ ಇತರೆ ದೇಶಗಳ ವಿಚಾರಗಳ ಬಗ್ಗೆ ಮಾತನಾಡುವುದು ನೆರೆ ರಾಷ್ಟ್ರದ ರಾಜಕೀಯ ವ್ಯಕ್ತಿಗಳಿಗೆ ಹವ್ಯಾಸವಾಗಿ ಹೋಗಿದೆ ಎಂದು ತಿಳಿಸಿದ್ದಾರೆ. 

ತಮ್ಮ ದೇಶದ ಆಂತರಿಕ ವಿಚಾರ ಹಾಗೂ ತಮ್ಮ ದೇಶದ ಅಲ್ಪ ಸಂಖ್ಯಾತರ ಬಗ್ಗೆ, ಅವರ ಮೇಲಿನ ದೌರ್ಜನ್ಯದ ಬಗ್ಗೆ ಮೊದಲು ಪಾಕಿಸ್ತಾನ ಗಮನಹರಿಸಬೇಕಿದೆ. ಅವರಿಗೆ ನ್ಯಾಯ ದೊರಕಿಸಿಕೊಡಿಸುವುದರತ್ತ ಗಮನ ಹರಿಸಬೇಕಿದೆ. ತಮ್ಮ ದೇಶದ ಅಲ್ಪಸಂಖ್ಯಾತರು, ಸಿಖ್ಖರನ್ನು ರಕ್ಷಣೆ ಮಾಡಲಾಗದವರು, ಇತರರಿಗೆ ಹೇಗೆ ಮಾಡಬೇಕೆಂಬುದನ್ನು ಹೇಳುವ ಅಗತ್ಯವಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com