ಸಿಡಿಎಸ್ ಗೆ 2 ಜಂಟಿ ಕಾರ್ಯದರ್ಶಿಗಳು, 13 ಉಪ ಕಾರ್ಯದರ್ಶಿಗಳು

ಬಿಪಿನ್ ರಾವತ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ರಕ್ಷಣಾ ಪಡೆಗಳ ಮುಖ್ಯಸ್ಥರ ಇಲಾಖೆಗೆ ಕೇಂದ್ರ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಿಪಿನ್ ರಾವತ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ರಕ್ಷಣಾ ಪಡೆಗಳ ಮುಖ್ಯಸ್ಥರ ಇಲಾಖೆಗೆ ಕೇಂದ್ರ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಿದೆ.

ಹೌದು.. ಇತ್ತೀಚೆಗೆ ವಾಯುಪಡೆ, ನೌಕಾಪಡೆ ಮತ್ತು ಸೇನಾಪಡೆಗಳು ಒಳಪಟ್ಟಿರುವ ಮೂರೂ ಪಡೆಗಳ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ಬಿಪಿನ್ ರಾವತ್ ಅವರ ಕಚೇರಿಗೆ ಕೇಂದ್ರ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಿದೆ. ಅದರಂತೆ ಈ ಕಚೇರಿಗೆ ಇಬ್ಬರು ಜಂಟಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದು, ಇದಲ್ಲದೆ 13 ಉಪ ಕಾರ್ಯದರ್ಶಿಗಳು, 22 ಅಧೀನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಕಳೆದ ಡಿಸೆಂಬರ್ 30ರಂದು ಕೇಂದ್ರ ಸರ್ಕಾರ `ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್) ಹುದ್ದೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಿತ್ತು. ವಾಯು ಮತ್ತು ನೌಕಾ ಸೇನೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಿಡಿಎಸ್ ಹುದ್ದೆ ಸೃಷ್ಟಿಗೆ ಕೇಂದ್ರ ಭದ್ರತಾ ಸಂಪುಟ ಸಮಿತಿ ಕಳೆದ ವಾರ ಗ್ರೀನ್ ಸಿಗ್ನಲ್ ನೀಡಿ ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಈ ಹುದ್ದೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಬಿಪಿನ್ ರಾವತ್ ಅವರೇ ಆಯ್ಕೆ ಆಗಲಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿತ್ತು. ಅದರಂತೆ ಈಗ ಬಿಪಿನ್ ರಾವತ್ ಹೆಸರು ಅಧಿಕೃತವಾಗಿ ಪ್ರಕಟವಾಗಿದೆ. ಸಿಡಿಎಸ್ ಮುಖ್ಯಸ್ತರ ನಿವೃತ್ತಿ ವಯಸ್ಸನ್ನು ಕೇಂದ್ರ ಸರ್ಕಾರ 65ಕ್ಕೆ ನಿಗದಿ ಮಾಡಿದೆ. ಬಿಪಿನ್ ರಾವತ್ ಅವರಿಗೆ 64 ವರ್ಷವಾಗಿದ್ದು 4 ವರ್ಷಗಳ ಕಾಲ ಅವರೇ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಸಿಡಿಎಸ್ ವಿಶೇಷತೆ ಏನು?:
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.

ಕೆಲಸ ಏನು?
ಮೂರು ಸೇನೆಗಳ ನಡುವೆ ಉತ್ತಮ ಸಂವಹನ ಸಮನ್ವಯ ಸಾಧಿಸುವುದು ಮುಖ್ಯ ಉದ್ದೇಶ. ಸೇನೆಗೆ ಹಂಚಿಯಾಗುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಮೂರು ಸೇನೆಗಳ ಸಂಬಂಧ ಏಕ ವ್ಯಕ್ತಿಯಾಗಿ ಪ್ರಧಾನಿಗಳಿಗೆ ಸಲಹೆ ನೀಡುವುದು. ಮೂರು ಸೇನೆಗಳ ಸಂಬಂಧ ಆಡಳಿತ್ಮಾಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ತ್ರಿಸೇನೆಗಳ ಜಂಟಿ ನಿರ್ವಹಣೆ ಹಾಗೂ ತರಬೇತಿ ಕೂಡಾ ಈ ಮಹಾದಂಡನಾಯಕ ವ್ಯಾಪ್ತಿಯಲ್ಲಿ ಬರಲಿದೆ. ಸೈಬರ್, ಬಾಹ್ಯಾಕಾಶ, ವಿಶೇಷ ಭದ್ರತಾ ದಳಗಳು ಕೂಡಾ ಮಹಾ ದಂಡನಾಯಕ ಕಚೇರಿ ವ್ಯಾಪ್ತಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com