370ನೇ ವಿಧಿ ರದ್ದತಿ ಬೆಂಬಲಕ್ಕೆ ಬದಲಾಗಿ ನನ್ನ ವಿರುದ್ಧದ ಆರೋಪ ಹಿಂದೆಗೆತಕ್ಕೆ ಭಾರತ ಸರ್ಕಾರ ಸಿದ್ದವಿತ್ತು: ಝಾಕೀರ್ ನಾಯಕ್

ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದ್ದಾದರೆ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಅವರ ವಿರುದ್ಧ ಹಣ ವರ್ಗಾವಣೆ ಆರೋಪಗಳನ್ನು ಕೈಬಿಡಲು ಹಾಗೂ  "ಭಾರತಕ್ಕೆ ಸುರಕ್ಷಿತ ಹಿಂದಿರುಗುವಿಕೆಗೆ" ಮಾರ್ಗ ತೆರೆಯಲು ಒಪ್ಪಿದೆ ಎಂದು ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್  ಗಂಬೀರ ಆರೋಪ ಮಾಡಿದ್ದಾರೆ.
ಝಾಕೀರ್ ನಾಯಕ್
ಝಾಕೀರ್ ನಾಯಕ್

ನವದೆಹಲಿ: ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದ್ದಾದರೆ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಅವರ ವಿರುದ್ಧ ಹಣ ವರ್ಗಾವಣೆ ಆರೋಪಗಳನ್ನು ಕೈಬಿಡಲು ಹಾಗೂ  "ಭಾರತಕ್ಕೆ ಸುರಕ್ಷಿತ ಹಿಂದಿರುಗುವಿಕೆಗೆ" ಮಾರ್ಗ ತೆರೆಯಲು ಒಪ್ಪಿದೆ ಎಂದು ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್  ಗಂಬೀರ ಆರೋಪ ಮಾಡಿದ್ದಾರೆ.

ನಾಯಕ್ ಅವರ ಪಿಆರ್ ಟೀಂ ನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇಸ್ಲಾಮಿಕ್ ಬೋಧಕ ನಾಯಕ್ ಸೆಪ್ಟೆಂಬರ್ ನಲ್ಲಿ ಸರ್ಕಾರದ ಪ್ರತಿನಿಧಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಅವರು ಕಾಶ್ಮೀರದ ಬಗ್ಗೆ ಈ ಒಪ್ಪಂದವನ್ನು ಮುಂದಿಟ್ಟಿದ್ದಾರೆ ಆದರೆ ನಾಯಕ್ ಅದಕ್ಕೆ ನಿರಾಕರಿಸಿದ್ದಾರೆ ಎಂದು ಹೇಳಿದೆ.

"ಮೂರೂವರೆ ತಿಂಗಳ ಮೊದಲು, ಭಾರತೀಯ ಅಧಿಕಾರಿಗಳು ಭಾರತೀಯ ಸರ್ಕಾರದ ಪ್ರತಿನಿಧಿಯೊಂದಿಗಿನ ಖಾಸಗಿ ಸಭೆಗಾಗಿ ನನ್ನನ್ನು ಸಂಪರ್ಕಿಸಿದರು. ಅವರು ನನ್ನನ್ನು ಭೇಟಿ ಮಾಡಲು 2019 ರ ಸೆಪ್ಟೆಂಬರ್ ನಾಲ್ಕನೇ ವಾರದಲ್ಲಿ ಪುತ್ರಜಯ (ಮಲೇಷಿಯಾದ ನಗರ) ಗೆ ಬಂದಾಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಗೃಹ ಸಚಿವ ಅಮಿತ್ ಷಾ ಅವರ ನೇರ ಸೂಚನೆಯ ಮೇರೆಗೆ ತಾನು ನಿಮ್ಮನ್ನು ಭೇಟಿಯಾಗುತ್ತಿರುವುದಾಗಿ ಹೇಳಿದ್ದರು" ನಾಯಕ್ ತಮ್ಮ ಮುಂಬೈ ಮೂಲದ ಪಿಆರ್ ತಂಡ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ನೆಲೆಸಿರುವ ನಾಯಕ್, ಕೋಮು ಪ್ರಚೋದಕ ಭಾಷಣಕಾರನೆನಿಸಿದ್ದು  ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಜುಲೈ 2016 ರಂದು ಢಾಕಾದ ಹೋಲೆ ಆರ್ಟಿಸನ್ ಬೇಕರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಇವರ ವಿರುದ್ಧ ಆರೋಪ ದಾಖಲಾಗಿದೆ.

"ಅವರು (ಪ್ರತಿನಿಧಿ) ನನ್ನ (ನಾಯಕ್) ಮತ್ತು ಭಾರತ ಸರ್ಕಾರದ ನಡುವಿನ ತಪ್ಪು ಕಲ್ಪನೆಗಳು ಮತ್ತು ತಪ್ಪು ಸಂವಹನ ಕೊನೆಗಾಣಿಸಲು ಭಾರತಕ್ಕೆ ತನ್ನ ಸುರಕ್ಷಿತ ವಾಪಾಸಾತಿಗೆ ಮಾರ್ಗವನ್ನು ತೋರಿಸಲು ಬಯಸಿದ್ದರಿ.

"ಅವರು (ಪ್ರತಿನಿಧಿ) ಭಾರತ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ನನ್ನ ಸಂಪರ್ಕಗಳನ್ನು ಬಳಸಲು ಬಯಸುತ್ತೇನೆ ಎಂದು ಹೇಳಿದರು. ನಮ್ಮ ಹಾಗೂ ಅವರ  (ಪ್ರತಿನಿಧಿ) ನಡುವಿನ ಸಭೆ ಲವಾರು ಗಂಟೆಗಳ ಕಾಲ ನಡೆಯಿತು. ಅವರು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಹಿಂತೆಗೆದುಕೊಂಡ  ಬಿಜೆಪಿ ಸರ್ಕಾರವನ್ನು ಣಾನು ಬೆಂಬಲಿಸಬೇಕೆಂದು ಬಯಸಿದ್ದರು ಆದರೆ ನಾನು ಅದನ್ನು ನಿರಾಕರಿಸಿದೆ."

ಈ ಪ್ರಸ್ತಾಪವನ್ನು ನಿರಾಕರಿಸಿದ ನಂತರ, ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡದಂತೆ ಕೇಳಿಕೊಳ್ಳಲಾಗಿದೆ ಎಂದು ನಾಯಕ್ ಹೇಳಿದ್ದಾರೆ.

ಮಾಲ್ಡೀವಿಯನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ನಶೀದ್ ಅವರು ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ "ಝಾಕೀರ್ ನಾಯಕ್ ಮಾಲ್ಡೀವ್ಸ್ ಗೆ  ಬರಲು ಬಯಸಿದ್ದರು, ನಾವು ಅವರನ್ನು ಅನುಮತಿಸಲಿಲ್ಲ" ಎಂದು ಹೇಳಿದ ಸುಮಾರು ಒಂದು ತಿಂಗಳ ನಂತರ ನಾಯಕ್ ಹೇಳಿಕೆ ಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ರಾಷ್ಟ್ರೀಯ ನಾಗರಿಕರ ರಿಜಿಸ್ಟ್ರಾರ್‌ಗೆ ಬೆಂಬಲವಾಗಿ ಹೇಳಿಕೆಗಳನ್ನು ನೀಡಿದ ಭಾರತೀಯ ಮುಸ್ಲಿಂ ನಾಯಕರು ಸಹ ಇದೇ ಬಗೆಯ  "ಬ್ಲ್ಯಾಕ್‌ಮೇಲ್, ಒತ್ತಡ ಅಥವಾ ಬಲವಂತ" ಕ್ಕೆ ಒಳಗಾಗಿರಬೇಕು ಎಂದು ನಾಯಕ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com