ಅವಧಿಗಿಂತ ಮೊದಲೇ ಬಾಕಿ ಹಣ ಪಾವತಿ; ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ನಿಗಧಿತ ಅವಧಿಗಿಂತ ಮೊದಲೇ ನೀಡಬೇಕಾದ ಬಾಕಿ ಹಣವನ್ನು ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಧನ್ಯವಾದ  ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ನಿಗಧಿತ ಅವಧಿಗಿಂತ ಮೊದಲೇ ನೀಡಬೇಕಾದ ಬಾಕಿ ಹಣವನ್ನು ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಧನ್ಯವಾದ  ಹೇಳಿದೆ.

ಹೌದು.. ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಪೂರ್ಣ ಪ್ರಮಾಣದ ಮೊತ್ತವನ್ನು ಭಾರತ ಸರ್ಕರಾ ನಿಗದಿತ ಸಮಯಕ್ಕೂ ಮೊದಲೇ ಪಾವತಿಸಿದ್ದು, ಈ ಮೂಲಕ ಭಾರತ 193 ಸದಸ್ಯ ರಾಷ್ಟ್ರಗಳ ಪೈಕಿ ನಿಗದಿತ ಅವಧಿಗೂ ಮುನ್ನವೇ ಪೂರ್ಣ ಹಣ ಪಾವತಿಸಿದ ನಾಲ್ಕನೇ ರಾಷ್ಟ್ರವಾಗಿದೆ. ಇದೇ ಕಾರಣಕ್ಕೆ ವಿಶ್ವಸಂಸ್ಥೆ ಭಾರತಕ್ಕೆ ಧನ್ಯವಾದ ತಿಳಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್​ರ ವಕ್ತಾರ ಸ್ಟಿಫನ್ ಗುಜರಿಕ್ ನಾಲ್ಕೂ ರಾಷ್ಟ್ರಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದು, ಈಗಾಗಲೇ ಕೆಲವರು ಹಣ ಪಾವತಿ ಗುರಿಯನ್ನು ಸಾಧಿಸಿದ್ದಾರೆ. ಇನ್ನೂ ಅನೇಕರು ಇದನ್ನು ಸಾಧಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ. ಸ್ಟಿಫನ್ ಗುಜರಿಕ್ ಮಾಹಿತಿ ಪ್ರಕಾರ 146 ರಾಷ್ಟ್ರಗಳು ಅಲ್ಪ ದೇಣಿಗೆ ಪಾವತಿಸಿದ್ದು, ನಾಲ್ಕು ರಾಷ್ಟ್ರಗಳು ಮಾತ್ರ ಪೂರ್ತಿ ದೇಣಿಗೆ ನೀಡಿವೆ.

ಇದಕ್ಕೂ ಮೊದಲು ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಬಾಕಿ ಪಾವತಿಗೆ  ಫೆ.1ರವರೆಗೆ ಅಂತಿಮ ಗಡುವು ನೀಡಲಾಗಿತ್ತು. ಆದರೆ ಇದಕ್ಕೂ ಮುನ್ನವೇ ಅಂದರೆ ಭಾರತ ಕಳೆದ ಜ.10ರಂದು ವಿಶ್ವಸಂಸ್ಥೆಗೆ ಒಟ್ಟು 23,396,496 ಡಾಲರ್ (166 ಕೋಟಿ ರೂ.) ಪಾವತಿ ಮಾಡಿದೆ. ಭಾರತಕ್ಕೂ ಮುಂಚೆ ಅಮೆರಿಕ, ಪೋರ್ಚುಗಲ್ ಮತ್ತು ಉಕ್ರೇನ್ ದೇಶಗಳು ವಿಶ್ವಸಂಸ್ಥೆಗೆ ಪೂರ್ತಿ ಹಣ ಪಾವತಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com